ETV Bharat / state

ಹೊಸ ವರ್ಷಾಚರಣೆ: ಮಹಿಳೆಯರ ಸುರಕ್ಷತೆಗೆ ಹು-ಧಾ ಪೊಲೀಸ್ ಆಯುಕ್ತರ ಸೂಚನೆ

author img

By ETV Bharat Karnataka Team

Published : Dec 31, 2023, 2:14 PM IST

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್​ ಅವರು ಹೊಸ‌ ವರ್ಷಾಚರಣೆಯ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

Etv Bharat
Etv Bharat
ಹು-ಧಾ ಪೊಲೀಸ್ ಆಯುಕ್ತರ ಸೂಚನೆ

ಧಾರವಾಡ: ಹೊಸ‌ ವರ್ಷಾಚರಣೆಗೆ ಸಂತೋಷಕೂಟಗಳ ಆಯೋಜನೆ ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದರೆ ಇಂಥ ಮೋಜಿನ ಗುಂಗಲ್ಲಿ ಅಪರಾಧಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತವೆ. ಈ ಕಾರಣದಿಂದ​ ಕೂಟಗಳನ್ನು ಆಯೋಜಿಸುವವರಿಗೆ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಅಬಕಾರಿ ಇಲಾಖೆ ವತಿಯಿಂದ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್​ ತಿಳಿಸಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೈಸನ್ಸ್​​​​ ಹೊಂದಿದ ರೆಸಾರ್ಟ್​ ಹಾಗೂ ಹೋಟೆಲ್​ಗಳಲ್ಲಿ ಪ್ರತಿ ದಿನದ ಸಮಯಕ್ಕಿಂತ ಅರ್ಧ ಗಂಟೆ ಮಾತ್ರ ಹೆಚ್ಚು ಸಮಯ ನೀಡಿದ್ದೇವೆ. ಅಷ್ಟರಲ್ಲೇ ಅವರು ಎಲ್ಲಾ ಪಾರ್ಟಿ ಮುಗಿಸಬೇಕು. ವರ್ಷಾಚರಣೆಯಲ್ಲಿ ಮಹಿಳೆಯರ ಬಗ್ಗೆ ಹೆಚ್ಚಿನ ಕಾಳಜಿ ಹರಿಸಬೇಕು. ಪಾರ್ಟಿ ನೆಪದಲ್ಲಿ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಪಾರ್ಟಿಗೆ ಬರುವ ಮಹಿಳೆಯರ ಬಗ್ಗೆ ಕೈಗೊಳ್ಳಬೇಕಿರುವ ಕ್ರಮ‌ಗಳ ಕುರಿತು ಎಚ್ಚರಿಕೆ ನೀಡಲಾಗಿದೆ. ಯಾವುದೇ‌‌ ರೀತಿಯ ಡ್ರಗ್ಸ್​​ಗೆ ಅವಕಾಶವಿಲ್ಲ. ಡ್ರಗ್ಸ್​ ಫ್ರೀ ಪಾರ್ಟಿ ಆಗಿರಬೇಕು. ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆಗೆ ತಿಳಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 15 ದಿನ 'ಮಾಲ್ ಆಫ್ ಏಷ್ಯಾ' ಬಂದ್, ನಿಷೇಧಾಜ್ಞೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.