ETV Bharat / state

'ದಿ ಕಾಶ್ಮೀರ ಫೈಲ್ಸ್' ಚಲನಚಿತ್ರ ಪ್ರದರ್ಶನಕ್ಕೆ ಶೇ. 9ರಷ್ಟು ರಾಜ್ಯ ಜಿಎಸ್‌ಟಿ ವಿನಾಯಿತಿ

author img

By

Published : Mar 14, 2022, 6:47 PM IST

ಸಿನಿಮಾ ಹಾಗೂ ಮಲ್ಟಿಪ್ಲೆಕ್ಸ್ ಮಂದಿರಗಳ ನೋಂದಾಯಿತ ತೆರಿಗೆ ಪಾವತಿದಾರರು ವೀಕ್ಷಕರು/ಗ್ರಾಹಕರಿಗೆ ರಾಜ್ಯದ ಪಾಲಿನ ಶೇ.9ರಷ್ಟು ಜಿಎಸ್‌ಟಿ ವಿಧಿಸಬಾರದು. ಈ ಹಣವನ್ನು ಸರ್ಕಾರ ಭರಿಸಲಿದೆ..

kashmir-files
'ದಿ ಕಾಶ್ಮೀರ ಫೈಲ್ಸ್'

ಧಾರವಾಡ : "ದಿ ಕಾಶ್ಮೀರ ಫೈಲ್ಸ್" ಚಲನಚಿತ್ರ ಪ್ರದರ್ಶನಕ್ಕೆ ರಾಜ್ಯ ಸರ್ಕಾರವು ತನ್ನ ಪಾಲಿನ ರಾಜ್ಯ ಜಿಎಸ್‌ಟಿಯನ್ನು ವೀಕ್ಷಕರಿಗೆ ವಿಧಿಸದಿರಲು ಸಿನಿಮಾ ಪ್ರದರ್ಶಕರಿಗೆ ಸೂಚಿಸಿದೆ. ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.

gst-exemption-to-the-kashmir-files-movie-in-dharwada
ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುವುದು..

ಜಿಲ್ಲೆಯ ಸಿನಿಮಾ, ಮಲ್ಟಿಪ್ಲೆಕ್ಸ್ ಮಂದಿರಗಳ ಮಾಲೀಕರು ಟಿಕೆಟ್‌ನಲ್ಲಿ ಶೇ.9ರಷ್ಟು ರಿಯಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತಿಳಿಸಿದ್ದಾರೆ. ಮುಖ್ಯಮಂತ್ರಿ ನಿರ್ದೇಶನದ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಸಿನಿಮಾ ಹಾಗೂ ಮಲ್ಟಿಪ್ಲೆಕ್ಸ್ ಮಂದಿರಗಳ ನೋಂದಾಯಿತ ತೆರಿಗೆ ಪಾವತಿದಾರರು ವೀಕ್ಷಕರು/ಗ್ರಾಹಕರಿಗೆ ರಾಜ್ಯದ ಪಾಲಿನ ಶೇ.9ರಷ್ಟು ಜಿಎಸ್‌ಟಿ ವಿಧಿಸಬಾರದು. ಈ ಹಣವನ್ನು ಸರ್ಕಾರ ಭರಿಸಲಿದೆ.

ಟಿಕೆಟ್ ಮೇಲೆ "ರಾಜ್ಯ ಸರ್ಕಾರದ ಆದೇಶದ ಮೇರೆಗೆ ಹಣ ಸಂಗ್ರಹಿಸಿರುವುದಿಲ್ಲ" ಎಂದು ದಪ್ಪ ಅಕ್ಷರಗಳಲ್ಲಿ ಮುದ್ರಿಸಿರಬೇಕು. ಈ ಆದೇಶವು ಇಂದು ಮಾರ್ಚ್ 14ರಿಂದ ಮುಂದಿನ ಆರು ತಿಂಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ.

ಸಿನಿಮಾ ಮಲ್ಟಿಪ್ಲೆಕ್ಸ್ ಮಂದಿರಗಳ ಮಾಲೀಕರು ರಾಜ್ಯ ಜಿಎಸ್‌ಟಿ ಮರುಪಾವತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರ್ಕಾರ ಪ್ರಕಟಿಸಲಿದೆ. ಜಿಎಸ್‌ಟಿ ಅಧಿಕಾರಿಗಳು ಈ ಆದೇಶ ಜಾರಿಗೊಳಿಸಿ ವರದಿ ನೀಡಲು ಸೂಚಿಸಲಾಗಿದೆ.

ಓದಿ: 'ದಿ ಕಾಶ್ಮೀರ್​ ಫೈಲ್ಸ್​'​ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕಾಂಗ್ರೆಸ್​ ಶಾಸಕ ಆಗ್ರಹ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.