ಹುಬ್ಬಳ್ಳಿ: ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಈ ಭಾಗದ ಜನರ ಬಹುದಿನದ ಕನಸಾಗಿದೆ. ದಶಕಗಳ ಈ ಹೋರಾಟಕ್ಕೆ ರಾಜ್ಯ ವನ್ಯ ಜೀವಿಗಳ ಮಂಡಳಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇದು ಈಗ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಕೈಬಿಡಬೇಕು ಎಂಬ ಒತ್ತಡ ಹೆಚ್ಚಾಗಿದೆ. ಫ್ರೈಡೇ ಫಾರ್ ಫ್ಯೂಚರ್ ಕರ್ನಾಟಕ ಎಂಬ ಸಂಘಟನೆ ಟ್ವಿಟರ್ನಲ್ಲಿ ಯೋಜನೆ ಧಿಕ್ಕರಿಸಿ ಅಭಿಯಾನ ಹಮ್ಮಿಕೊಂಡಿದೆ. ಪರಿಸರ ತಜ್ಞರು ಹಾಗೂ ವನ್ಯಜೀವಿ ಪ್ರಾಣಿ ಪ್ರೀಯರು ಸೇರಿಕೊಂಡು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಸಿದ್ದಪಡಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ಸಹಿ ಮಾಡಿಸಿಕೊಳ್ಳಲಾಗುತ್ತಿದೆ.
ಟ್ವಿಟರ್ ಮೂಲಕ ಸುಮಾರು 7 ಸಾವಿರ ವಿರೋಧಿ ಟ್ವೀಟ್ಗಳನ್ನು ಸಂಗ್ರಹಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದು ಯೋಜನೆ ಕೈಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ.