ಹುಬ್ಬಳ್ಳಿ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕಾರಜೋಳ, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಪರಸ್ಪರ ಅಪನಂಬಿಕೆ ಇದೆ ಎಂದರು.
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರೂ ಒಂದೊಂದು ಹೇಳುತ್ತಾರೆ. ಸರ್ಕಾರ ಪತನದ ದಿನ ಹತ್ತಿರ ಬಂದಿದೆ. ಅವರು ರಾಜೀನಾಮೆ ಕೊಟ್ಟ ನಂತರ ನಾವು ಸರ್ಕಾರ ಮಾಡುತ್ತೇವೆ. ಬಹುಮತ ಇಲ್ದಿದ್ರೆ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಕೊಡಲಿ ಎಂದರು.
ಇನ್ನೂ ಮೈತ್ರಿ ಸರ್ಕಾರದ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆಸಿದ ಅವರು, ಅವರಿಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೌರವಯುತವಾಗಿ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಕುಟುಕಿದರು.