ETV Bharat / state

ಆನ್​ಲೈನ್​ ಶಿಕ್ಷಣದಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ ಈ ಸರ್ಕಾರಿ ಶಾಲೆ..!

ಯಾವ ಖಾಸಗಿ ಶಾಲೆಗೂ ಕೂಡಾ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಯೊಂದು ಆನ್​ಲೈನ್​ ಶಿಕ್ಷಣವನ್ನು ಪ್ರಾರಂಭಿಸಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

special school
ವಿಶೇಷ ಶಾಲೆ
author img

By

Published : Jul 30, 2020, 5:22 PM IST

ಹುಬ್ಬಳ್ಳಿ: ಲಾಕ್​ಡೌನ್ ಜಾರಿಯಾದ ಮೇಲೆ ಎಲ್ಲ ಕ್ಷೇತ್ರಗಳಲ್ಲೂ ಅಪರಿಮಿತವಾದ ಬದಲಾವಣೆಗಳಾಗಿವೆ. ಶಿಕ್ಷಣ ಕ್ಷೇತ್ರದಲ್ಲೂ ಕೂಡಾ ಅನಿವಾರ್ಯ ಅನ್ನಿಸುವಂತಹ ಕೆಲವೊಂದು ಬದಲಾವಣೆಗಳು ಜರುಗುತ್ತಿವೆ.

ಆನ್​ಲೈನ್​ ಶಿಕ್ಷಣಕ್ಕೆ ಶಾಲೆಗಳು ಮಾರುಹೋಗುತ್ತಿವೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಆನ್​ಲೈನ್​ ಶಿಕ್ಷಣ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಇಲ್ಲೊಂದು ಸರ್ಕಾರಿ ಶಾಲೆ ಕೂಡ ಯಶಸ್ವಿಯಾಗಿ ಆನ್​ಲೈನ್​​ ಶಿಕ್ಷಣ ನಡೆಸುತ್ತಿದೆ. ಆ ಶಾಲೆ ಇರೋದು ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ.

ವಿಶೇಷ ಶಾಲೆ

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ವಾಟ್ಸ್​ಆ್ಯಪ್​ ಗ್ರೂಪ್​ ರಚಿಸಿಕೊಂಡು ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಮಕ್ಕಳಿಗೆ ಗೊತ್ತಿಲ್ಲದ ವಿಷಯಗಳನ್ನು ವಿಡಿಯೋ ಮಾಡಿ ಕಳಿಸಿ ಅವರ ಸಮಸ್ಯೆ ಬಗೆಹರಿಸುತ್ತಾರೆ.

ವಾರಕ್ಕೊಮ್ಮೆ ಶಿಕ್ಷಕರು ಶಾಲೆಗೆ ಬಂದು ಮಾಡಿದ ಎಲ್ಲಾ ಪಠ್ಯ ಚಟುವಟಿಕೆಗಳನ್ನು ಪರಿಶೀಲಿಸುತ್ತಾರೆ. ಮಕ್ಕಳೂ ಕೂಡಾ ಆನ್​ಲೈನ್​ ಕಲಿತ ಪಾಠಗಳನ್ನು ಒಪ್ಪಿಸುತ್ತಾರೆ. ಕೋವಿಡ್​ ನಿಯಂತ್ರಣ ಮಾರ್ಗಸೂಚಿಯಂತೆ ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ಶಾಲೆಗಳು ನಡೆಯುತ್ತವೆ. ಇದರಿಂದ ತುಂಬಾ ಉಪಯೋಗವಾಗಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.

ಈ ಮಕ್ಕಳು ಬಸ್ ಹಾಗು ರೈಲು ಮಾದರಿಯ ಕೋಣೆಗಳಲ್ಲಿ ಓದುತ್ತಾರೆ ಎಂಬುದು ಮತ್ತೊಂದು ವಿಶೇಷ. ಒಟ್ಟಿನಲ್ಲಿ ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರ ಮಧ್ಯೆ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬುದನ್ನು ಈ ಶಾಲೆ ಸಾಬೀತುಪಡಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.