ಧಾರವಾಡ: ಜಿಲ್ಲೆಯ ಗೃಹರಕ್ಷಕದಳ ಇಲಾಖೆಯ ಗೌರವ ಸ್ವಯಂ ಸೇವಕ ಕಮಾಂಡೆಂಟ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ್‍ಕುಮಾರ್ ನೀಲಕಂಠ ಪಾಟೀಲ್ ಕಳೆದ 10 ವರ್ಷಗಳಿಂದ ಗೃಹರಕ್ಷಕದಳ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 2018-19ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ನಿಡಲಾಗಿದೆ.
ಕುಮಾರೇಶ್ವರ ನಗರದಲ್ಲಿ ಕಟ್ಟಡ ಬಿದ್ದಾಗ ಮತ್ತು ಅಳ್ನಾವರದಲ್ಲಿ ಪ್ರವಾಹ ಸಂದರ್ಭ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು. ಜಿಲ್ಲೆಯಲ್ಲಿ ನಡೆಯುವ ಹೋಳಿ ಹಬ್ಬ, ಈದ್ ಮಿಲಾದ್, ರಂಜಾನ್, ಗಣೇಶ, ಗಣ್ಯ ವ್ಯಕ್ತಿಗಳ ಆಗಮನ ಸಮಯದಲ್ಲಿ ಬಂದೋಬಸ್ತ್ ಕರ್ತವ್ಯಗಳನ್ನು ಶಿಸ್ತುಬದ್ದವಾಗಿ ನಿಭಾಯಿಸಿದ್ದಾರೆ.
ಸತೀಶ್‍ಕುಮಾರ್ ನೀಲಕಂಠ ಪಾಟೀಲ್ ಅವರ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆ ಮಾಡಲಾಗಿದೆ. ಗೃಹರಕ್ಷಕದಳ ಕಚೇರಿ ಸಿಬ್ಬಂದಿ ಹಾಗೂ ಎಲ್ಲ ಘಟಕಾಧಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಗೃಹರಕ್ಷಕ ಸದಸ್ಯರುಗಳು ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.