ಹುಬ್ಬಳ್ಳಿ: ನವನಗರದ ಕರ್ನಾಟಕ ಸರ್ಕಲ್ ಬಳಿ ರಸ್ತೆ ಕಾಮಗಾರಿ ನಡೆಸುವ ವೇಳೆಯಲ್ಲಿ ಅಡುಗೆ ಅನಿಲದ (ಗ್ಯಾಸ್ ಸಿಲಿಂಡರ್) ಪೈಪ್ಲೈನ್ ಒಡೆದು ಅನಿಲ ಸೋರಿಕೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಯಿತು.
ಮನೆಗೆ 24×7 ಅಡುಗೆ ಅನಿಲ ಸರಬರಾಜು ಮಾಡುವ ಪೈಪ್ಲೈನ್ ಇದಾಗಿದ್ದು, ಕಾಮಗಾರಿ ವೇಳೆ ಸೋರಿಕೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಸೋರಿಕೆ ತಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.