ಹುಬ್ಬಳ್ಳಿ: ರೈಲ್ವೆ ಸೇವೆ ಎಲ್ಲರಿಗೂ ಅಚ್ಚುಮೆಚ್ಚು, ಬಡವರ ಪಾಲಿಗಂತೂ ಇದು ವರದಾನವಾಗಿದೆ. ಇಂತಹ ರೈಲ್ವೆ ಇಲಾಖೆ ಈಗ ಪರಿಸರ ಸ್ನೇಹಿಯಾಗಿದ್ದು, ವಿನೂತನ ಕಾರ್ಯಚಟುವಟಿಕೆ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ನೈರುತ್ಯ ರೈಲ್ವೆಯಿಂದ ತಲೆಯೆತ್ತಿದ ವಸುಂದರಾ ನರ್ಸರಿ
ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ವರ್ಕ್ ಶಾಪ್ ಆವರಣದಲ್ಲಿ 'ವಸುಂದರಾ ನರ್ಸರಿ' ಮಾಡಿದ್ದು, ಎಲ್ಲೆಡೆಯೂ ಹಸಿರುಮಯಗೊಳಿಸಿದೆ. ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಪಾಕ್ಷಿಕ ಯೋಜನೆಯಡಿ ರೈಲ್ವೆ ನಿಲ್ದಾಣ ಕಾಲೊನಿಯಲ್ಲಿ ಹತ್ತು ಹಲವಾರು ಹೂವಿನ ಹಾಗೂ ಔಷಧ ಗಿಡಗಳನ್ನು ಬೆಳೆಸುವ ಮೂಲಕ ಜನರಲ್ಲಿ ಹಸಿರೇ ಉಸಿರು ಎಂಬ ಜಾಗೃತಿ ಮೂಡಿಸುತ್ತಿದೆ.
ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್ ನಿರ್ದೇಶನದಲ್ಲಿ ರೈಲ್ವೆ ಸಿಬ್ಬಂದಿ ಸ್ವಯಂಪ್ರೇರಿತರಾಗಿ ಇಂತಹದೊಂದು ಮಹತ್ವಪೂರ್ಣ ಕಾರ್ಯಕ್ಕೆ ಕೈ ಹಾಕಿರುವುದು ಶ್ಲಾಘನೀಯ.