ETV Bharat / state

ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಅದ್ಧೂರಿ ಮೆರವಣಿಗೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ನಿಮಜ್ಜನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ganeshothsava-procession-at-hubballi
ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಅದ್ಧೂರಿ ಮೆರವಣಿಗೆ
author img

By ETV Bharat Karnataka Team

Published : Sep 21, 2023, 5:55 PM IST

Updated : Sep 21, 2023, 10:54 PM IST

ಹುಬ್ಬಳ್ಳಿ : ನಗರದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ನಿಮಜ್ಜನ ಮೆರವಣಿಗೆ ಬಹಳ ವಿಜೃಂಭಣೆಯಿಂದ ನಡೆಯಿತು. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ‌ಆರ್ ಪಾಟೀಲ್ ಅವರು ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ನಿಮಜ್ಜನ ಮೆರವಣಿಗೆಗೆ ಚಾಲನೆ ನೀಡಿದರು.

ಪಂಚವಾದ್ಯ, ಡೋಲು, ಡಿಜೆ ಮೇಳಗಳು ಮೆರವಣಿಗೆಗೆ ಮೆರಗು ನೀಡಿದವು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಗಣೇಶನಿಗೆ ಜೈಕಾರ ಕೂಗಿದರು. ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ರಾಣಿ ಚೆನ್ನಮ್ಮ ಮೈದಾನ ಭಗವಾಧ್ವಜ ಮತ್ತು ಕೇಸರಿ ಬಾವುಟಗಳಿಂದ ತುಂಬಿ ತುಳುಕುತ್ತಿತ್ತು. ಮೆರವಣಿಗೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, 2024ರಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗುತ್ತಾರೆ. ನರೇಂದ್ರ ಮೋದಿಯವರನ್ನು ವಿರೋಧಿಸುವವರೆಲ್ಲ ದೇಶದ್ರೋಹಿಗಳು. ಮೋದಿಯವರು ಪ್ರಧಾನಿಯಾಗಿರುವ ಕಾರಣ ದೇಶ ಶಾಂತವಾಗಿದೆ. ವಿಘ್ನಗಳು ನಾಶವಾಗಲಿ ಎಂದು ಗಣೇಶ ಹಬ್ಬದ ದಿನ ಹೊಸ ಸಂಸತ್ ಭವನದಲ್ಲಿ ಮೋದಿ ಅಧಿವೇಶನ ಮಾಡುತ್ತಿದ್ದಾರೆ ಎಂದು ಹೇಳಿದರು.

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಹೇಳಿಕೆ​ ಕುರಿತು ಪ್ರತಿಕ್ರಿಯಿಸಿ, ಡಿಎಂಕೆ ಮುಖಂಡನೋರ್ವ ಸನಾತನ ಧರ್ಮವನ್ನು ರೋಗ ಎಂದು ಹೇಳುತ್ತಾನೆ. ಸನಾತನ ಧರ್ಮವನ್ನು ವಿರೋಧಿಸುವವರೆಲ್ಲರಿಗೆ ಏಡ್ಸ್ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು. ಜೊತೆಗೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೀವು ಲೋಕಸಭೆ ಚುನಾವಣೆಗೆ ನಿಲ್ಲಿ. ಆಗ ಜನ ಲಾಗಾ ಹೊಡಿಸ್ತಾರೆ ಎಂದು ಹೇಳಿದರು.

ಇದನ್ನೂ ಓದಿ : ತಿಲಕರು ಆರಂಭಿಸಿದ ಬೆಳಗಾವಿ ಗಣೇಶೋತ್ಸವಕ್ಕೆ 119 ವರ್ಷಗಳ ಸಂಭ್ರಮ!

Last Updated : Sep 21, 2023, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.