ಹುಬ್ಬಳ್ಳಿ: ಕೌನ್ ಬನೇಗಾ ಕರೋಡ್ ಪತಿ ಎಂಬ ಸ್ಪರ್ಧೆಯಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಉಣಕಲ್ ಗವಿಸಿದ್ದೇಶ್ವರ ನಗರದ ಮಲ್ಲಿಕಾರ್ಜುನ ಪಾಟೀಲ ವಂಚನೆಗೆ ಒಳಗಾದ ವ್ಯಕ್ತಿ. ಕರೆ ಮಾಡಿದ ವಂಚಕ ಕೌನ್ ಬನೇಗಾ ಕರೋಡಪತಿ ಸ್ಪರ್ಧೆಯಲ್ಲಿ ನಿಮಗೆ 25 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಹಣ ಕಳುಹಿಸಲು ಬ್ಯಾಂಕ್ ಖಾತೆಯ ವಿವರ ನೀಡಿ ಎಂದು ಮಾಹಿತಿ ಪಡೆದ ವಂಚಕರು, ಬಹುಮಾನದ ಹಣ ಪಡೆಯಲು 34,500 ರೂಪಾಯಿ ಪಾವತಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ಮಲ್ಲಿಕಾರ್ಜುನ್ ಗೂಗಲ್ ಪೇ ಮೂಲಕ ಹಣ ವರ್ಗಾಯಿಸಿದ್ದರೆಂತೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.