ಹುಬ್ಬಳ್ಳಿ : ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಚಾಲಾಕಿ ಕಳ್ಳರನ್ನು ಬಂಧಿಸಿ 11 ಬೈಕ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ದೇಶಪಾಂಡೆ ನಗರದ ನಿವಾಸಿ ಹನಂತ ಸಂಜು ಮಣ್ಣವಡ್ಡರ, ರಾಯನಾಳ ಗ್ರಾಮದ ನಿವಾಸಿ ಚಂದ್ರಶೇಖರ ಗುದ್ದಿ, ಸೆಟ್ಲಮೆಂಟ್ ನಿವಾಸಿ ವಿನಾಯಕ ಮೈಸೂರು, ಉಮಚಗಿ ಗ್ರಾಮದ ನಿವಾಸಿ ವೀರೇಶ ಅಂಗಡಿ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.
ಬಂಧಿತರಿಂದ ಸುಮಾರು 7,80,000 ಮೌಲ್ಯದ 11 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಆಯುಕ್ತ ಲಾಬೂ ರಾಮ್, ಡಿಸಿಪಿ ಪಿ. ಕೃಷ್ಣಕಾಂತ ಮಾರ್ಗದರ್ಶನದ ಮೇರೆಗೆ ಹುಬ್ಬಳ್ಳಿ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಎಸ್ ಕೆ ಹೊಳೆನ್ನವರ ನೇತೃತ್ವದಲ್ಲಿ ಬಂಧಿಸಿದ್ದಾರೆ.