ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್ ಕನಕಪುರದ ಭಷ್ಟ ಬಂಡೆ ಎಂದು ಮಾಜಿ ಸಚಿವ, ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಕುಂದಗೋಳ ತಾಲೂಕಿನ ಕಳಸ ಗ್ರಾಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಮಾರಿಕೋಣಕ್ಕೆ ಹೋಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ಕನಕಪುರದ ಭ್ರಷ್ಟ ಬಂಡೆ. ಮಾರಿ ಹಬ್ಬಕ್ಕೆ ಬಲಿ ಕೊಡುವ ಮುಂಚೆ ಕೋಣಕ್ಕೆ ಹೇಗೆ ಎಣ್ಣೆ ಹಚ್ಚಿ ತಿಕ್ತಾರೋ ಹಾಗೆ ಈ ಕಾಂಗ್ರೆಸ್ನವರು ಅವರನ್ನು ಬಲಿ ಕೊಡಲೆಂದೇ ಇಲ್ಲಿಗೆ ಕರೆ ತಂದಿದ್ದಾರೆ ಎಂದು ಹರಿಹಾಯ್ದರು.
ಶಿವಳ್ಳಿಯವರ ಪರವಾಗಿ ಕಣ್ಣೀರಿಟ್ಟು ನಾಟಕ ಮಾಡುತ್ತಾರೆ. ಇಲ್ಲಿಗೆ ಬಂದಿರುವ ಮಾರಿ ಕೋಣಗಳನ್ನು ಕಡಿದು ವಾಪಸ್ ಕಳಿಸಬೇಕಾಗಿದೆ ಎಂದು ಆಕ್ರೋಶ ವ್ತಕ್ತಪಡಿಸಿದರು.