ಧಾರವಾಡ: ಬಟ್ಟೆ ಇಸ್ತ್ರಿ ಮಾಡಿ ಕಷ್ಟಪಟ್ಟು ಕಟ್ಟಿಸಿದ್ದ ಮನೆ ನೆರೆ ಹಾವಳಿಗೆ ಕೊಚ್ಚಿ ಹೋಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎದುರು ಮಹಿಳೆವೋರ್ವಳು ಕಣ್ಣೀರಿಟ್ಟ ಘಟನೆ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಇಂದು ಕಂಡುಬಂತು.
ಜಿಲ್ಲೆಯ ಪ್ರವಾಹ ಸ್ಥಳಗಳಿಗೆ ಇಂದು ಭೇಟಿ ನೀಡಿದ್ದ ಹೆಚ್ ಡಿ ರೇವಣ್ಣ ಎದುರು ಸುಷ್ಮಾ ಕೇಸರಕರ್ ಎಂಬುವರು ತಮ್ಮ ನೋವನ್ನು ಹೇಳಿಕೊಂಡರು. ₹ 5 ಲಕ್ಷ ಪರಿಹಾರ ಹಾಗೂ ತಿಂಗಳ ₹ 5 ಸಾವಿರ ಮನೆ ಬಾಡಿಗೆ ಸರ್ಕಾರದಿಂದ ನಿಮಗೆ ಸಿಗುತ್ತೆ ಮಾಹಿತಿ ನೀಡಿದರು.
ಅಲ್ಲದೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿದ್ರು.