ಧಾರವಾಡ: ಸುಪ್ರೀಂ ಕೋರ್ಟ್ ಸಚಿವ ಸ್ಥಾನಕ್ಕೆ ತಡೆ ನೀಡಿದ ಆದೇಶವನ್ನು ಪಾಲಿಸುತ್ತೇನೆ. ಮಾಧ್ಯಮಗಳಲ್ಲಿ ಅದನ್ನೇ ದೊಡ್ಡದಾಗಿ ಬಿಂಬಿಸುವ ಕೆಸಲವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಹಠದಿಂದ ಮಂತ್ರಿ ಆಗಬೇಕು ಎಂದು ಜೆಡಿಎಸ್ ಬಿಟ್ಟು ಬಂದಿಲ್ಲ. 17 ಜನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆವು. ಇಲ್ಲಿ ಪಕ್ಷ ರಾಜಕಾರಣ ಸತ್ತು ಹೋಗಿದೆ. ದೇಶದಲ್ಲಿ ಕುಟುಂಬ ರಾಜಕಾರಣಕ್ಕೆ ಕೊನೆ ಹಾಡಿದ್ದೇ ನಾವು.
ಅನಂತ್ ಕುಮಾರ್ ನಿಧನದ ನಂತರ ಅವರ ಕುಟುಂಬಕ್ಕೆ ಟಿಕೆಟ್ ಸಿಕ್ಕಿಲ್ಲ. ಇನ್ನು ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡುವುದರ ಬಗ್ಗೆ ಕಾದು ನೋಡೋಣ. ದೇವೇಗೌಡರ ಜೆಡಿಎಸ್ ಪಕ್ಷವನ್ನು ನಾವೆಲ್ಲ ಒದ್ದು ಬಂದವರು. ಯಾರನ್ನು ಒದ್ದು ಬಂದೆವೋ ಅವರ ಜೊತೆಗೆ ಈಗ ನಮ್ಮ ಮದುವೆ ಆಗುತ್ತಿದೆ. ಇದೊಂದು ರೀತಿ ಷೆಕ್ಸಪೀಯರ್‌ನ ಹ್ಯಾಂಬ್ಲೇಟ್ ನಾಟಕದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.