ಧಾರವಾಡ : ಬಸವರಾಜ ಹೊರಟ್ಟಿ ನನ್ನ ಆತ್ಮಿಯ ಸ್ನೇಹಿತ. ಅದರಲ್ಲಿ ಎರಡು ಮಾತಿಲ್ಲ. ಈವರೆಗೆ ಜಾತ್ಯಾತೀತ ಪಕ್ಷದ ಜೊತೆಗಿದ್ದರು. ಇವತ್ತು ಕೋಮುವಾದಿ ಪಕ್ಷ ಸೇರಿದ್ದಾರೆ ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರು ಯಾವ ವಿಶ್ವಾಸದಲ್ಲಿದ್ದಾರೋ ಗೊತ್ತಿಲ್ಲ. ಕೋಮುವಾದಿ ಪಕ್ಷ ಸೇರಿದ್ದಕ್ಕೆ ಅವರಿಗೆ ತೊಂದರೆಯಾಗಿದೆ. ಅವರ ಶಕ್ತಿ ಕಡಿಮೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ್ ಅವರಿಗೆ ಶಕ್ತಿ ಸಿಕ್ಕಿದೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಎಲ್ಲದರ ಬೆಲೆ ಏರಿಕೆ ಕಂಡಿವೆ. ಪೆಟ್ರೋಲ್ ಇತರ ದರಗಳಲ್ಲೂ ಏರಿಕೆ ಕಂಡಿದೆ. 14 ಕೋಟಿ ಜನರು ಉದ್ಯೋಗವಿಲ್ಲದೆ ಬಳಲುತ್ತಿದ್ದಾರೆ. ಜನರ ಬದುಕು ಅಸಹನೀಯವಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಆದರೆ, ದೇಶದಲ್ಲಿ ಪ್ರಜಾಪ್ರಭುತ್ವದ ಧ್ವನಿ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ : ವಿಧಾನಪರಿಷತ್ ಚುನಾವಣೆ : ಎಲ್ಲಾ ಏಳು ನಾಮಪತ್ರಗಳು ಕ್ರಮಬದ್ಧ, ಅಧಿಕೃತ ಘೋಷಣೆ ಬಾಕಿ