ಹುಬ್ಬಳ್ಳಿ: ನೆರೆ ಹಾವಳಿ ಪ್ರದೇಶ ವೀಕ್ಷಿಸಿ, ಧಾರವಾಡಕ್ಕೆ ಆಗಮಿಸಬೇಕಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಧಾರವಾಡ ಜಿಲ್ಲೆಯ ಪ್ರವಾಸ ದಿಢೀರ್ ರದ್ದುಗೊಳಿಸಿ ಮೈಸೂರಿಗೆ ತೆರಳಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ನೆರೆ ಹಾವಳಿ ಪ್ರದೇಶ ವೀಕ್ಷಿಸಿ, ಧಾರವಾಡ ಜಿಲ್ಲೆಗೆ ಆಗಮಿಸಬೇಕಾಗಿತ್ತು. ಆದರೆ ದಿಢೀರನೇ ಪ್ರವಾಸವನ್ನು ರದ್ದುಗೊಳಿಸಿ ಬೆಳಗಾವಿಯಿಂದ ಮೈಸೂರಿಗೆ ತೆರಳಿದ್ದಾರೆ. ಇಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ, ನವಲಗುಂದ ಹಾಗೂ ಧಾರವಾಡ ತಾಲೂಕಿನ ನೆರೆ ಪ್ರದೇಶಗಳಿಗೆ ಭೇಟಿ ನೀಡುವುದರ ಜೊತೆಗೆ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಬೇಕಿತ್ತು.
ಆದರೆ ಕುಮಾರಸ್ವಾಮಿ ಪ್ರವಾಸ ದಿಢೀರ್ ಪ್ರವಾಸ ರದ್ದುಗೊಳಿಸಿದ್ದು, ನಿರಾಶ್ರಿತರು ಹಾಗೂ ಪಕ್ಷದ ಕಾರ್ಯಕರ್ತರಿಗೆ ನಿರಾಸೆಯನ್ನುಂಟು ಮಾಡಿದೆ.