ETV Bharat / state

ಬಿಎಸ್​ವೈ ಜನಪರ ಆಡಳಿತ ನೀಡಿದ್ದಾರೆ, ಅದನ್ನು ಬೊಮ್ಮಾಯಿ ಮುಂದುವರಿಸಲಿ: ಜಗದೀಶ್​ ಶೆಟ್ಟರ್​ - ಜಗದೀಶ್ ಶೆಟ್ಟರ್

ಬಿಜೆಪಿಗೆ ತನ್ನದೇ ಆದಂತಹ ತತ್ವ ಸಿದ್ಧಾಂತವಿದೆ ಅದರ ಅಡಿಯಲ್ಲಿ ಬೊಮ್ಮಾಯಿ ಅವರು ಕೆಲಸ ಮಾಡಲಿ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ದಿ ಮಾಡಲಿ, ರಾಜ್ಯದಲ್ಲಿ ಅಪೂರ್ಣವಾದಂತಹ ಕೆಲಸಗಳನ್ನ ಮುಂದುವರಿಸಲು ನಿರ್ದೇಶನಗಳನ್ನ ನೀಡುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ
ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ
author img

By

Published : Aug 7, 2021, 1:14 PM IST

Updated : Aug 7, 2021, 1:29 PM IST

ಹುಬ್ಬಳ್ಳಿ: ಪಕ್ಷದಲ್ಲಿ ಹಿರಿಯ ನಾಯಕರಿಗೆ ಕಡೆಗಣನೆ ಮಾಡಿಲ್ಲ. ಹಿರಿಯರಿಗೂ ಸ್ಥಾನಮಾನ ನೀಡಿದ್ದಾರೆ. ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರು ಜನಪರವಾದ ಆಡಳಿತ ನೀಡಿದ್ದಾರೆ. ಅದರ ಅಡಿ ಬಸವರಾಜ ಬೊಮ್ಮಾಯಿ ಕೆಲಸ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಚಿವ ಸಂಪುಟದಲ್ಲಿ ಹಿರಿಯರಿಗೂ ಸ್ಥಾನ ಮಾನ ನೀಡಲಾಗಿದೆ. ಆರ್.ಅಶೋಕ್, ಈಶ್ವರಪ್ಪ ಸೇರಿದಂತೆ ಹಲವರಿಗೆ ಸ್ಥಾನ ನೀಡಿದೆ. ಯಡಿಯೂರಪ್ಪ ಅವರು ಈವರೆಗೂ ಜನಪರವಾದ ಆಡಳಿತ ನೀಡಿದ್ದಾರೆ. ಅದರ ಅಡಿ ಬಸವರಾಜ ಬೊಮ್ಮಾಯಿ ಕೆಲಸ ಮಾಡಲಿದ್ದಾರೆ ಎಂದರು.

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ

ಬಿಜೆಪಿಗೆ ತನ್ನದೇ ಆದಂತಹ ತತ್ವ ಸಿದ್ಧಾಂತವಿದೆ ಅದರ ಅಡಿ ಬೊಮ್ಮಾಯಿ ಅವರು ಕೆಲಸ ಮಾಡಲಿ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ದಿ ಮಾಡಲಿ, ರಾಜ್ಯದಲ್ಲಿ ಅಪೂರ್ಣವಾದಂತಹ ಕೆಲಸಗಳನ್ನ ಮುಂದುವರೆಸಲು ನಿರ್ದೇಶನಗಳನ್ನ ನೀಡುತ್ತೇನೆ, ಮುಂದಿನ‌ ಚುನಾವಣೆಯಲ್ಲಿ ಪಕ್ಷ ನೀಡಿದ ಜವಾಬ್ದಾರಿಗಳನ್ನ ನಿಭಾಯಿಸುತ್ತೇನೆ ಎಂದರು.

ಇದನ್ನೂ ಓದಿ : ಹೊಸ ಸಂಪುಟದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಯಾರ‍್ಯಾರಿಗೆ ಯಾವ ಖಾತೆ.. ಇಲ್ಲಿದೆ ಸಂಪೂರ್ಣ ವಿವರ

ನೂತನ ಸಚಿವರಾದ ಮುರಗೇಶ ನಿರಾಣಿ ಹಾಗೂ ಶಂಕರ ಪಾಟೀಲ್​ ಮುನೇನಕೊಪ್ಪ ಸಚಿವರಾದ ನಂತರ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ ಎಂದ ಅವರು, ಶಾಸಕ ಅರವಿಂದ ಬೆಲ್ಲದ ಅಸಮಾಧಾನದ ಹೇಳಿಕೆ ನೀಡುತ್ತಿರೋ ಹಿನ್ನೆಲೆ ಈ‌ ಬಗ್ಗೆ ನಾನು ಯಾವುದೇ ಚರ್ಚೆ ಮಾಡಲ್ಲ ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಬೆಲ್ಲದ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದರು.

Last Updated : Aug 7, 2021, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.