ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಯಾವಾಗೆಲ್ಲ ಅಧಿಕಾರದಲ್ಲಿ ಇರುತ್ತದೋ ಅವಾಗೆಲ್ಲಾ ಹಿಂದೂ ಮುಸ್ಲಿಂ ಗಲಭೆಯಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ ಟಿ ರವಿ ಹೇಳಿದ್ರಲ್ಲಿ ತಪ್ಪೇನಿದೆ?, ಸಿದ್ದರಾಮಯ್ಯ ಬೆಳಗ್ಗೆಯಿಂದ ಸಂಜೆಯವರೆಗೆ ಟಿಪ್ಪು ಸುಲ್ತಾನ್ ಪೂಜೆ ಮಾಡ್ತಾ ಇರ್ತಾರೆ. ಟಿಪ್ಪು ಸುಲ್ತಾನ್‌ಗೆ ಬೆಂಬಲ ನೀಡೋದು, ಆರ್ಎಸ್ಎಸ್ಗೆ ಬೈಯೋದು ಅವರ ನಡವಳಿಕೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂಗಳ ಹತ್ಯೆಯಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಮುಸ್ಲಿಂ ಗಲಭೆ ನಿಂತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂ ಮುಸ್ಲಿಂ ಗಲಭೆ ಇರುತ್ತೆ. ಹಾಗಾಗಿ ಸಿಟಿ ರವಿ ಆ ರೀತಿ ಹೇಳಿದ್ದಾರೆ ಎಂದರು.
ಒಕ್ಕಲಿಗರ ವೇದಿಕೆಯಲ್ಲಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ವಿಚಾರವಾಗಿ ಮಾತನಾಡುತ್ತಾ, ಅಧಿಕಾರದ ಲಾಲಸೆಗೆ ಡಿ ಕೆ ಶಿವಕುಮಾರ್ ವೇದಿಕೆ ದುರುಪಯೋಗ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಯಾವುದೇ ವೇದಿಕೆಯನ್ನಾದ್ರೂ ದುರುಪಯೋಗ ಮಾಡಿಕೊಳ್ತಾರೆ. ಪಂಜಾಬ್ನಲ್ಲಿ ಸಿದ್ದು ಗಲಾಟೆಯಿಂದ ಕಾಂಗ್ರೆಸ್ ನಿರ್ನಾಮ ಆಯ್ತು. ಹಾಗೇಯೆ ಕರ್ನಾಟಕದಲ್ಲಿ ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಿರ್ನಾಮ. ಡಿ ಕೆ ಶಿವಕುಮಾರ್ ಸಿದ್ದರಾಮಯ್ಯ ಜಗಳದಿಂದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಮತ್ತೆ ಶುರುವಾಯ್ತು ಮುಂದಿನ ಸಿಎಂ ಕೂಗು: ಹೈಕಮಾಂಡ್ ಮಧ್ಯ ಪ್ರವೇಶ?