ETV Bharat / state

ಧಾರವಾಡದಲ್ಲಿ ಕೊನೆಗೂ ಸೆರೆ ಸಿಕ್ಕ ಮಂಗ: ನಿಟ್ಟುಸಿರು ಬಿಟ್ಟ ಸ್ಥಳೀಯರು! - ಧಾರವಾಡ ಲೇಟೆಸ್ಟ್ ನ್ಯೂಸ್​

ಕಳೆದ ಹದಿನೈದು ದಿನಗಳಿಂದ ಧಾರವಾಡದ ಜನರ ನಿದ್ದೆಗೆಡಿಸಿದ್ದ ಮಂಗವನ್ನು ಇಂದು ಅರಣ್ಯಾಧಿಕಾರಿಗಳು ಅರವಳಿಕೆ ನೀಡಿ ಸೆರೆ ಹಿಡಿದಿದ್ದಾರೆ.

Forest officer captured a money in Dharwad
ಕೊನೆಗೂ ಸೆರೆ ಸಿಕ್ಕ ಮಂಗ
author img

By

Published : May 30, 2020, 12:14 PM IST

Updated : May 30, 2020, 1:02 PM IST

ಧಾರವಾಡ: ಕಳೆದ ಹದಿನೈದು ದಿನಗಳಿಂದ ನಗರದ ಮುರುಘಾ ಮಠದ ಸಮೀಪವಿರುವ ಡಿಪೋ ಸರ್ಕಲ್ ಜನರ ನಿದ್ದೆಗೆಡಿಸಿದ್ದ ಮಂಗವನ್ನು ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕೊನೆಗೂ ಸೆರೆ ಸಿಕ್ಕ ಮಂಗ

ನಗರದ ಮುರುಘಾ ಮಠ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಕ್ಕ ಸಿಕ್ಕ ಜನರ ಮೇಲೆ ಮಂಗ ದಾಳಿ‌ ನಡೆಸಿತ್ತು. ಹದಿನೈದು ದಿನಗಳಿಂದ 30ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿತ್ತು.

ಇದನ್ನು ಸೆರೆ ಹಿಡಿಯಲು ಕಾರ್ಯ ಪ್ರವೃತರಾದ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಎರಡು ದಿನ ಕಾರ್ಯಾಚರಣೆ ನಡೆಸಿದ್ದು, ಅರವಳಿಕೆ ಮದ್ದು ನೀಡುವ ಮೂಲಕ ಮಂಗನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ: ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ಮಂಗನ ದಾಳಿ, ಕೈಗೆ ಸಿಕ್ಕರೂ ಪರಾರಿ

ಮಂಗನ ಸೆರೆ ಹಿಡಿದ ಅಧಿಕಾರಿಗಳಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದು, ‌‌‌ಜನರು‌ ನಿಟ್ಟುಸಿರು ಬಿಡುವಂತಾಗಿದೆ.

Last Updated : May 30, 2020, 1:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.