ETV Bharat / state

ಗಂಟೆಗಟ್ಟಲೇ ಆಗಸದಲ್ಲೇ ಸುತ್ತಾಡಿ ಲ್ಯಾಂಡ್ ಆದ ವಿಮಾನ... ಸಂಸದ ಹೆಗಡೆ ಸೇರಿ 49 ಪ್ರಯಾಣಿಕರು ಸೇಫ್​ - Hubli airport news

ಬೆಳಗ್ಗೆ ಬೆಂಗಳೂರಿನಿಂದ ಹೊರಟಿದ್ದ ಇಂಡಿಗೋ ವಿಮಾನವು 8.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಇಳಿಯಲು ಸಿಗ್ನಲ್ ದೊರೆಯದೆ ಆಗಸದಲ್ಲೇ ಸುತ್ತಾಡಿದೆ. ಕಡೆಗೂ ಸಿಗ್ನಲ್​ ದೊರೆತ ಬಳಿಕ ವಿಮಾನ ಸೇಫ್​ ಆಗಿ ಲ್ಯಾಂಡ್​ ಆಗಿದೆ.

Flight safe landing
ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನ
author img

By

Published : Aug 16, 2020, 12:11 PM IST

ಹುಬ್ಬಳ್ಳಿ: ಸಂಸದ ಅನಂತ್​ ಕುಮಾರ್​ ಹೆಗಡೆ ಸೇರಿದಂತೆ 49 ಪ್ರಯಾಣಿಕರಿದ್ದ ವಿಮಾನ, ಇಲ್ಲಿನ ಏರ್​ಪೋರ್ಟ್​ನಲ್ಲಿ ನಿಗದಿತ ಸಮಯಕ್ಕೆ ಇಳಿಯದೆ ಗಂಟೆಗೂ ಅಧಿಕ ಕಾಲ ಆಗಸದಲ್ಲಿ ಸುತ್ತಾಡಿ ಆತಂಕ ಸೃಷ್ಟಿಸಿತ್ತು. ಸದ್ಯ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

Flight safe landing
ಪ್ರಯಾಣಿಕರು ಸೇಫ್​
ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನ, ಸಂಸದ ಅನಂತಕುಮಾರ್​ ಹೆಗಡೆ ಸೇರಿ 49 ಪ್ರಯಾಣಿಕರು ಸುರಕ್ಷಿತ

ಬೆಳಗ್ಗೆ ಬೆಂಗಳೂರಿನಿಂದ ಹೊರಟಿದ್ದ ಇಂಡಿಗೋ ವಿಮಾನವು 8.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಇಳಿಯಲು ಸಿಗ್ನಲ್ ದೊರೆಯದೆ ಆಗಸದಲ್ಲೇ ಸುತ್ತಾಡಿದೆ. ಅಕಸ್ಮಾತ್ ಹುಬ್ಬಳ್ಳಿಯಲ್ಲಿ ವಿಮಾನ ಇಳಿಯಲು ಸಾಧ್ಯವಾಗದೆ ಹೋಗಿದ್ದಲ್ಲಿ ಗೋವಾ ಅಥವಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸುವ ಬಗ್ಗೆ ಯೋಚನೆ ಮಾಡಲಾಗಿತ್ತು. ಆದರೆ ಅಂತಿಮವಾಗಿ ಮತ್ತೆ ಸಿಗ್ನಲ್ ದೊರೆತ ಕಾರಣ 10.25ರ ವೇಳೆ ಸುರಕ್ಷಿತವಾಗಿ ಲ್ಯಾಂಡಿಂಗ್ ಸಾಧ್ಯವಾಗಿದೆ. ಅನಂತ್​ ಕುಮಾರ್​ ಹೆಗಡೆ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.