ಧಾರವಾಡ : ಪೂರ್ವಾನುಮತಿ ಇಲ್ಲದೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಧ್ವಜದ ಮೆರವಣಿಗೆ ನಡೆಸುತ್ತಿದ್ದ 13 ಜನರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕಲಘಟಗಿ ಪಟ್ಟಣದಲ್ಲಿ ಇಂದು ಬೆಳಗ್ಗೆ 10ರಿಂದ 10:30ರ ಸಮಯದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಎರಡು ಕಿ.ಮೀ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ನಡೆಸಲಾಗಿತ್ತು. ಇದಕ್ಕೆ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ. ಜೊತೆಗೆ ಕೋವಿಡ್ ನಿಯಮಗಳನ್ನ ಉಲ್ಲಂಘನೆ ಮಾಡಲಾಗಿತ್ತು.
ಈ ಸಂಬಂಧ ಮೆರವಣಿಗೆಯಲ್ಲಿದ್ದ ಮಂಜುನಾಥ ಮುರಳಿ, ಶಾನಪ್ಪಗೌಡ ಪಾಟೀಲ, ಹರಿಶಂಕರ ಮಠದ, ಅಜ್ಮತ್ತುಲ್ಲಾ ಜಾಗೀರದಾರ್, ಸಿದ್ದು ತಲಬಾಗಿಲು, ಸುಧೀರ್ ಬೋಳಾರ, ಬಾಳು ಖಾನಾಪುರ, ಗಂಗಾಧರ ಚಿಕ್ಕಮಠ, ರಾಮನಗೌಡ ಪಾಟೀಲ, ಗಿರೀಶ್ ಸೂರ್ಯವಂಶಿ, ಮೈನುದ್ದೀನ್ ಖಾಸಿಮನವರ, ಪ್ರವೀಣ್ ಸೂರ್ಯವಂಶಿ, ಬಾಬಾಜಾನ್ ತೆರಗಾಂವ್ ಸೇರಿ ಇತರರ ವಿರುದ್ಧ ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಓದಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ : ಲೈಟಿಂಗ್ಸ್ನಲ್ಲಿ ಕಂಗೊಳಿಸುತ್ತಿದೆ ಸು'ತ್ರಿ'ವರ್ಣಸೌಧ
ಇವರನ್ನು ಹೊರತುಪಡಿಸಿ ಉಳಿದವರ ಮೇಲೆ ಕೇಸ್ ದಾಖಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.