ಹುಬ್ಬಳ್ಳಿ: ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ರೆ ವಾಹನ ಸೀಜ್ ಮಾಡಿ ದಂಡ ಹಾಕಲಾಗುತ್ತಿತ್ತು. ಆದ್ರೆ , ಇನ್ನು ಮುಂದೆ ಮಾಸ್ಕ್ ಇಲ್ಲದೆ ರಸ್ತೆಗೆ ಇಳಿಯುವವರಿಗೂ ದಂಡ ಬೀಳಲಿದೆ.
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ಪ್ರತಿಯೊಬ್ಬ ನಾಗರಿಕನೂ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮಾಸ್ಕ್ ಇಲ್ಲದೆ ಓಡಾಡುವಾಗ ಮೊದಲ ಬಾರಿಗೆ ಸಿಕ್ಕಿ ಬಿದ್ರೆ 200 ರೂಪಾಯಿ. ಎರಡನೇ ಬಾರಿ ಸಿಕ್ಕಿ ಬಿದ್ರೆ 300 ರೂಪಾಯಿ ದಂಡ ಹಾಕಲಾಗುತ್ತಿದೆ.
ಸಾರ್ವಜನಿಕ ಸ್ಥಳಲ್ಲಿ ಉಗುಳಿದ್ರೆ ಹಾಗೂ ಬಯಲಲ್ಲಿ ಶೌಚ ಮಾಡುವುದು ಕಂಡು ಬಂದರೆ ದಂಡ ಹಾಕಲಾಗುತ್ತದೆ. ಇದರಲ್ಲೂ ಕೂಡ ಮೊದಲ ಬಾರಿಗೆ ಸಿಕ್ಕಿ ಬಿದ್ರೆ 200 ರೂ. ಎರಡನೇ ಬಾರಿಗೆ ಸಿಕ್ಕಿ ಬಿದ್ರೆ, 300 ರೂ. ದಂಡ ಹಾಕಲಾಗುತ್ತಿದೆ.