ಧಾರವಾಡ: ಅಳಿಯನೋರ್ವ ಮಾವನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಜಿಲ್ಲೆಯ ಕಮಲಾಪುರದಲ್ಲಿ ನಡೆದಿದೆ. ಯಲ್ಲಪ್ಪ ಧೂಳಮ್ಮನವರ ಇರಿತಕ್ಕೊಳಗಾದ ವ್ಯಕ್ತಿ.
ಮೂಲತಃ ಶಿಗ್ಗಾಂವ್ ತಾಲೂಕಿನ ಅಂದಲಗಿ ಗ್ರಾಮದ ನಿವಾಸಿ ಯಲ್ಲಪ್ಪ, ಜ್ಯೋತಿ ಎಂಬವರನ್ನು ಪ್ರೀತಿಸಿ ವರಿಸಿದ್ದರು. ಕಳೆದ 12 ವರ್ಷದಿಂದ ಇವರ ಕುಟುಂಬ ಧಾರವಾಡದಲ್ಲಿ ವಾಸವಾಗಿತ್ತು. ನಿನ್ನೆ ಯಲ್ಲಪ್ಪ ಮತ್ತು ಆತನ ಹೆಂಡತಿ ನಡುವೆ ಜಗಳವಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಅಳಿಯ ಹೇಮಂತ ಗುಮ್ಮಗೋಳ ಏಕಾಏಕಿ ಯಲ್ಲಪ್ಪನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ.
ಹೊಟ್ಟೆ ಭಾಗದಲ್ಲಿ ತೀವ್ರವಾಗಿ ಗಾಯಗೊಂಡ ಯಲ್ಲಪ್ಪ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಲ್ಲಪ್ಪನ ವಿರುದ್ಧ ಉಪನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇವರ ತಾಯಿ ದೂರು ದಾಖಲಿಸಲು ಹೋದಾಗ ಪೊಲೀಸರು ಬೆದರಿಸಿದ್ದಾರೆ ಎಂದು ಯಲ್ಲಪ್ಪ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಾಗರದಲ್ಲಿ ಯುವಕನಿಗೆ ಚಾಕು ಇರಿತ.. ಕಾರಣ?