ETV Bharat / state

ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಹಾವಳಿ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ - ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Fatal attack on man in Hubli
ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
author img

By

Published : Aug 27, 2022, 12:27 PM IST

ಹುಬ್ಬಳ್ಳಿ: ನಗರದಲ್ಲಿ ಮತ್ತೆ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನ ಮೇಲೆ ನಡು ರಸ್ತೆಯಲ್ಲಿಯೇ ಚಾಕು ಹಾಗೂ ಬಾಟಲಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ತಡರಾತ್ರಿ ನಡೆದಿದೆ.

ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ..

ಇಂದಿರಾ ನಗರ ನಿವಾಸಿ ಯಶವಂತ ಭಂಡಾರಿ ಎಂಬಾತ ನಿನ್ನೆ ರಾತ್ರಿ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯಲ್ಲಿನ ಹೋಟೆಲ್​​ನಲ್ಲಿ ಬಿರಿಯಾನಿ ತೆಗೆದುಕೊಂಡು ಹೋಗಲು ಬಂದಿದ್ದ. ಆಗ ಸೆಟ್ಲಿಮೆಂಟ್​​ನ ಅಭಿಷೇಕ್ ಜಾಧವ್​ ಕೂಡಾ ಬಿರಿಯಾನಿ ಒಯ್ಯಲು ಹೋಟೆಲ್​​ಗೆ ಬಂದಿದ್ದಾನೆ.‌ ಆಗ ಇಬ್ಬರು ಪರಸ್ಪರ ಗುರಾಯಿಸಿ ನೋಡಿದ್ದಾರೆ. ಬಳಿಕ ಅಭಿಷೇಕ್​​ ತನ್ನ ಜೊತೆ ಇದ್ದ 10ಕ್ಕೂ ಹೆಚ್ಚು ಸಹಚರರ ಜೊತೆ ಸೇರಿ ಯಶವಂತ ಭಂಡಾರಿ ಮೇಲೆ ಚಾಕು ಹಾಗೂ ಬಾಟಲಿಗಳಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗ್ತಿದೆ.

Fatal attack on man in Hubli
ಅಭಿಷೇಕ್ ಜಾಧವ್​-ಹಲ್ಲೆ ಮಾಡಿದ ಆರೋಪಿ

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯಶವಂತನನ್ನು ಆತನ ಸಹೋದರರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಸಬಾಪೇಟ ಠಾಣೆಯ ಪೊಲೀಸರು ಭೇಟಿ ನೀಡಿ, ಅಭಿಷೇಕ ಜಾಧವ್ ಸೇರಿ 12 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗೋವಾದಿಂದ ಕೊಕೇನ್ ತಂದು ಮಾರುತ್ತಿದ್ದ ಅರೇಬಿಕ್ ಟೀಚರ್ ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.