ಧಾರವಾಡ: ಕೃಷಿ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತರು, ಹೊಸ ತಿದ್ದುಪಡಿಗೆ ರಾಜ್ಯ ಸರ್ಕಾರ ರಾಜ್ಯಪಾಲರ ಅನುಮೋದನೆಗೆ ಕಳಿಸಿದೆ. ಇದು ಸರಿಯಲ್ಲ. ರಾಜ್ಯಪಾಲರ ಮುಂದಿರುವ ತಮ್ಮ ತಿದ್ದುಪಡಿ ಕಡಿತವನ್ನು ವಾಪಸ್ ಪಡೆದು ರೈತರಿಗೆ ಶಾಪವಾಗಿರುವ ಈ ಮರಣಶಾಸನ ಹಿಂಪಡೆಯಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಯಾವುದೇ ಖರೀದಿದಾರ ರಾಜ್ಯದಲ್ಲಿ ಎಲ್ಲಿ ಬೇಕಾದಲ್ಲಿ ಖರೀದಿ ಮಾಡಬಹುದು. ರೈತರಿಗೆ ಈ ಮಾರುಕಟ್ಟೆಗಳು ಅನ್ವಯಿಸುವುದಿಲ್ಲ. ಅವನು ಖಾಸಗಿ ಮಾರುಕಟ್ಟೆ ನಿರ್ಮಿಸಿಕೊಳ್ಳಬಹುದಾಗಿದೆ. ಅವರು ರಾಜ್ಯ ಸರ್ಕಾರಗಳಿಗೆ ತೆರಿಗೆ ತುಂಬಬೇಕಾಗಿಲ್ಲ. ರೈತ ಉತ್ಪಾದನೆಗೆ ಕನಿಷ್ಠ ಬೆಂಬಲ ಬೆಲೆ ಗೊತ್ತಾಗುವುದು ಎಪಿಎಂಸಿ ಮೂಲಕ. ಖಾಸಗಿ ಮಾರುಕಟ್ಟೆ ಪ್ರಾರಂಭಗೊಂಡರೆ ಸರ್ಕಾರದ ಎಪಿಎಂಸಿಗಳು ಸಂಪೂರ್ಣ ನಶಿಸಿ ಹೋಗಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.