ETV Bharat / state

ಅಸ್ವಸ್ಥಗೊಂಡಿದ್ದ ರೈತ ಸಾವು; ಸಾಲ ಮರುಪಾವತಿಗೆ ಕಿರುಕುಳ ಆರೋಪ - ಬ್ಯಾಂಕ್​ ಮ್ಯಾನೇಜರ್​

ಬ್ಯಾಂಕ್​ ಮ್ಯಾನೇಜರ್​ ಸಾಲ ಮರುಪಾವತಿಗೆ ಬಂದಿದ್ದರಿಂದ ಮಾನಕ್ಕೆ ಅಂಜಿ ನಮ್ಮ ತಂದೆ ಮೃತಪಟ್ಟಿರುವುದಾಗಿ ಮೃತ ರೈತನ ಪುತ್ರ ಆರೋಪ ಮಾಡಿದ್ದಾರೆ.

Farmer who committed suicide
ಆತ್ಮಹತ್ಯೆ ಮಾಡಿಕೊಂಡ ರೈತ
author img

By ETV Bharat Karnataka Team

Published : Nov 2, 2023, 3:05 PM IST

Updated : Nov 7, 2023, 10:24 AM IST

ಹುಬ್ಬಳ್ಳಿ: ಮೂರ್ಛೆ ಹೋಗಿ ಅಸ್ವಸ್ಥಗೊಂಡಿದ್ದ ರೈತನೋರ್ವ ಮೃತಪಟ್ಟ ಘಟನೆ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ನಡೆದಿದೆ. ಮಹಾದೇವಪ್ಪ ಫಕೀರಪ್ಪ ಜಾವೂರ್ (75) ಮೃತ ರೈತ. ಬೆಳೆ ಸಾಲ ವಸೂಲಿ ಮಾಡಲು ಬ್ಯಾಂಕ್​ವೊಂದರ ಮ್ಯಾನೇಜರ್​ ಕಿರುಕುಳ‌ ನೀಡಿದ್ದರಿಂದ ಮಾನಕ್ಕೆ ಅಂಜಿ ನಮ್ಮ ತಂದೆ ಮೃತಪಟ್ಟಿರುವುದಾಗಿ ಮೃತರ ಪುತ್ರ ಫಕೀರಪ್ಪ ಆರೋಪಿಸಿದ್ದಾರೆ.

''ಮೂರ್ಛೆ ಹೋದಾಗ ಅವರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತ ರೈತ 19 ಎಕರೆ 16 ಗುಂಟಾ ಕೃಷಿ ಜಮೀನನ್ನು ಹೊಂದಿದ್ದು, 2015 ರಲ್ಲಿ ಮೊರಬ ಗ್ರಾಮದಲ್ಲಿರುವ ಬ್ಯಾಂಕ್​ನಿಂದ 14 ಲಕ್ಷ 50 ಸಾವಿರ ರೂ. ಬೆಳೆ ಸಾಲ ತೆಗೆದುಕೊಂಡಿದ್ದರು. ಅದಲ್ಲದೇ 2017ರ ವರೆಗೆ ಸುಮಾರು ಎರಡು ವರ್ಷಗಳ ಕಾಲ ಬೆಳೆ ಸಾಲ ರಿನೀವಲ್ ಕೂಡ ಮಾಡಿದ್ದರು. 2017ರಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಸಾಲ ಮರು ಪಾವತಿಯಾಗಿರಲಿಲ್ಲ. ಆದರೆ, ಬರಗಾಲದ ನಡುವೆಯೇ ಬ್ಯಾಂಕ್ ಮ್ಯಾನೇಜರ್ ಸಾಲ ವಸೂಲಿಗೆ ಬಂದಿದ್ದರು. ಇದರಿಂದ ಮಾನಕ್ಕೆ ಅಂಜಿ ಮೃತಪಟ್ಟಿದ್ದಾರೆ'' ಎಂದು ಮಗ ಆರೋಪಿಸಿದ್ದಾರೆ.

"ನಮ್ಮ ತಂದೆ ಗ್ರಾಮದಲ್ಲಿ ಗೌರವಯುತವಾಗಿ ಬಾಳಿದವರು, ಸ್ವಾಭಿಮಾನಿಯಾಗಿದ್ದರು.‌ ಆದರೆ, ಬ್ಯಾಂಕ್​ ಮ್ಯಾನೇಜರ್ ನನಗೆ ಯಾವಾಗಲೂ ಫೋನ್ ಕರೆ ಮಾಡಿ ಸಾಲದ ಬಗ್ಗೆ ವಿಚಾರಿಸುತ್ತಿದ್ದರು. ಆದರೆ, ಈ ಬಾರಿ ಏಕಾಏಕಿಯಾಗಿ ಗ್ರಾಮಕ್ಕೆ ಬಂದು ಸಾರ್ವಜನಿಕವಾಗಿ ನಮ್ಮ ತಂದೆಯ ಮಾನ ಹರಾಜು ಹಾಕಿದ್ದಾರೆ. ಇದರಿಂದ ನೊಂದು ನಮ್ಮ ತಂದೆ ಮೃತಪಟ್ಟಿದ್ದಾರೆ. ಈಗ ನಾನು ಆಸ್ತಿ ಮಾರಾಟ ಮಾಡಿ ಸಾಲ‌‌ ತೀರಿಸುತ್ತೇನೆ. ನಮ್ಮ ತಂದೆಯ ಜೀವ ತಂದು‌ ಕೊಡಿ" ಎಂದು‌ ಫಕೀರಪ್ಪ ಒತ್ತಾಯಿಸಿದ್ದಾರೆ.‌

ಈ‌ ಬಗ್ಗೆ ಮಾತನಾಡಿದ ನವಲಗುಂದ ತಹಶೀಲ್ದಾರ್​ ಸುಧೀರ ಸಾಹುಕಾರ ಅವರು, "ರೈತ ಮೃತಪಟ್ಟ ಬಗ್ಗೆ ನನ್ನ ಸಂತಾಪವಿದೆ. ಆದರೆ, ಬರಗಾಲದ ವೇಳೆ ಸಾಲ ವಸೂಲಾತಿಗೆ ಸರ್ಕಾರದ ನಿರ್ದೇಶನವಿಲ್ಲ. ಆದರೂ ಈ ಅವಘಡ ಸಂಭವಿಸಿದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳ‌ ಜೊತೆ ಚರ್ಚೆ ನಡೆಸಲಾಗುತ್ತಿದೆ. ಮೃತ ರೈತ ಕುಟುಂಬಕ್ಕೆ ಪರಿಹಾರದ ಜೊತೆಗೆ ಒನ್ ಟೈಂ ಸೆಟ್ಲ್​ಮೆಂಟ್ ಬಗ್ಗೆ ಚರ್ಚಿಸಲಾಗುತ್ತಿದೆ" ಎಂದರು.

"ಘಟನೆಗೆ ಕಾರಣವಾಗಿರುವ ಬ್ಯಾಂಕ್​ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಂತಹ ಘಟನೆಗಳು ಮುಂದೆ ನಡೆಯದಂತೆ ಲೀಡ್ ಬ್ಯಾಂಕ್ ಮ್ಯಾನೇಜರ್​ಗಳಿಗೆ ಸೂಚನೆ ನೀಡಲಾಗುವುದು. ಈ ರೀತಿ ಆಗದಂತೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ" ಎಂದು ಸಹ ಅವರು ಭರವಸೆ ನೀಡಿದರು.

ಮ್ಯಾನೇಜರ್ ಜೊತೆ ವಾಗ್ವಾದ ಮಾಡುವಾಗ ಮೃತ ರೈತ ಮಹದೇವಪ್ಪ ಕುಸಿದು ಬಿದ್ದಿದ್ದರು. ಅಸ್ವಸ್ಥಗೊಂಡಿದ್ದ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟ ಹಿನ್ನೆಲೆ ಧಾರವಾಡದ ಬ್ಯಾಂಕ್​ವೊಂದಕ್ಕೆ ರೈತರು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ರೈತರನ್ನು ಗೇಟ್ ಬಳಿ ತಡೆದರು.

ಇದನ್ನೂ ಓದಿ : ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಪ್ರಕರಣ: ಚಿಕ್ಕಮಗಳೂರು ಮೂಲದ ವ್ಯಕ್ತಿಯ ಶವ ಪತ್ತೆ

Last Updated : Nov 7, 2023, 10:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.