ಧಾರವಾಡ: ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿ ತರಬೇತಿಗೆ ತೆರಳುತ್ತಿದ್ದ ಎಂಟು ಯುವಕರಿಗೆ ನಗರದ ಕೋರ್ಟ್ ವೃತ್ತದಲ್ಲಿ ಮಂಗಳವಾರ ರಾತ್ರಿ ಮೆರವಣಿಗೆ ನಡೆಸಿದ ಜನರು ಭರ್ಜರಿ ಬೀಳ್ಕೊಡುಗೆ ನೀಡಿದ್ದಾರೆ.
ನೂರಾರು ಜನ ಸೇರಿಕೊಂಡು ಮೆರವಣಿಗೆ ಮಾಡಿ ಭಾವಿ ಸೈನಿಕರನ್ನು ಬಸ್ ಹತ್ತಿಸಿದ್ದಾರೆ. ತರಬೇತಿ ಪಡೆಯಲು ನಿನ್ನೆ ರಾತ್ರಿ ಖಾಸಗಿ ಬಸ್ ನಲ್ಲಿ ಯುವಕರು ಪ್ರಯಾಣ ಬೆಳೆಸಿದ್ದಾರೆ.
ಸೈನ್ಯದ ತರಬೇತಿಗೆ ಹಾಜರಾಗಲು ಹೊರಟಿದ್ದ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳ ಯುವಕರಿಗೆ ಕೋರ್ಟ್ ವೃತ್ತದಲ್ಲಿ ನೂರಾರು ಜನ ಸೇರಿ ಮೆರವಣಿಗೆ ಮಾಡಿ ಬೀಳ್ಕೊಡುಗೆ ನೀಡಿದ್ದಾರೆ. ರಾಷ್ಟ್ರಪ್ರೇಮದ ಘೋಷಣೆಗಳನ್ನು ಕೂಗುತ್ತ ಯುವಕರನ್ನು ಬೀಳ್ಕೊಡಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.