ಹುಬ್ಬಳ್ಳಿ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೌಂಡ್ ಟೇಬಲ್ - 37 ಹಾಗು ಲೇಡಿಸ್ ಸರ್ಕಲ್ ವತಿಯಿಂದ ಹಿರಿಯರಿಗೆ ರೋಗನಿರೋಧಕ ಮಾತ್ರೆಗಳ ಕಿಟ್ ವಿತರಣೆ ಮಾಡಲಾಯಿತು.
ಲೇಡಿಸ್ ಸರ್ಕಲ್ ಸದಸ್ಯೆ ಮಾನಸಿ ಕೋಠಾರಿ ಹಾಗೂ ರೌಂಡ್ ಟೇಬಲ್-37 ಸದಸ್ಯ ಹಿಮಾಂಶು ಕೋಠಾರಿ ನೇತೃತ್ವದಲ್ಲಿ ಜಿಂಕ್, ಕ್ಯಾಲ್ಸಿಯಂ, ವಿಟಮಿನ್ ಡಿ3, ವಿಟಮಿನ್ ಸಿ, ಆ್ಯಂಟಿ ಆ್ಯಸಿಡಿಟಿ ಸೇರಿದಂತೆ ರೋಗನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳ ಕಿಟ್ ವಿತರಿಸಿದರು.