ಹುಬ್ಬಳ್ಳಿ: ಜನವಸತಿ ಪ್ರದೇಶಗಳಲ್ಲಿ ಹಾದುಹೋಗುವ ಅಧಿಕ ಒತ್ತಡದ ವಿದ್ಯುತ್ ತಂತಿಗಳು ನಗರದಲ್ಲಿ ಅಪಾಯಕ್ಕೆ ದಾರಿ ಮಾಡಿ ಕೊಟ್ಟಿವೆ. ಇದು ಕೆಪಿಟಿಸಿಎಲ್ ಸಿಬ್ಬಂದಿಯ ನಿದ್ದೆಗೆಡಿಸಿದ್ರೆ ಜನರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಹುಬ್ಬಳ್ಳಿ-ಧಾರವಾಡದಂತಹ ಮಹಾನಗರಗಳ ಮಧ್ಯೆದಲ್ಲಿ ಜನವಸತಿ ಪ್ರದೇಶದ ಮೂಲಕ ಹಾದುಹೋಗುವ ಅಧಿಕ ಒತ್ತಡದ ವಿದ್ಯುತ್ ಸಂಪರ್ಕ ಅಪಾಯಕಾರಿಯಾಗಿದೆ. ಮಳೆ, ಗಾಳಿ ಹಾಗೂ ಆಕಸ್ಮಿಕವಾಗಿ ವಿದ್ಯುತ್ ತಂತಿಗಳು ಕತ್ತರಿಸಿ ಬಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತವೆ. ಆದರೆ ಜನ ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳದಿರುವುದು ಆತಂಕಕಾರಿ ಬೆಳವಣಿಗೆ.
ಜನರು ಕೂಡ ಇಂತ ಅಪಾಯಕಾರಿ ಲೈನ್ಗಳ ಕೆಳಗೆ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತವರನ್ನು ತೆರವುಗೊಳಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. ಪ್ರತಿ ವರ್ಷ ನಗರದಲ್ಲಿ 200 ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್ ನೀಡುತ್ತಿದ್ದಾರೆ. ಕೆಲವರು ಈ ನೋಟಿಸ್ಗಳ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ನಮಗೆ ಪರಿಹಾರ ಕೊಟ್ಟರೆ ಮನೆ ಖಾಲಿ ಮಾಡುವದಾಗಿ ಅಧಿಕಾರಿಗಳಿಗೆ ಹೇಳುತ್ತಿದ್ದಾರೆ. ಇದು ಕೆಪಿಟಿಸಿಎಲ್ ಸಿಬ್ಬಂದಿ ತಲೆನೋವು ತಂದಿದೆ.