ETV Bharat / state

ಇ - ಪೋರ್ಟಲ್​ ನೂತನ ಪ್ರಯೋಗ: 30 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಹು - ಧಾ ಪೊಲೀಸರು - ಈಟಿವಿ ಭಾರತ ಕನ್ನಡ ನ್ಯೂಸ್​

ಪೊಲೀಸ್​ ಇಲಾಖೆಯಿಂದ ಮೊಬೈಲ್​ ಪತ್ತೆ ಹಚ್ಚಲು ನೂತನ ಪ್ರಯೋಗ - ಮೊಬೈಲ್​​ಗಳನ್ನು ಪತ್ತೆ ಹಚ್ಚಲು ಇ ಪೋರ್ಟಲ್​​ ಬಳಕೆ - ಒಂದು ವಾರದಲ್ಲಿ 30 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಹು - ಧಾ ಪೊಲೀಸರು

e-portal-for-find-lost-mobiles-by-police
ಇ-ಪೋರ್ಟಲ್​ ನೂತನ ಪ್ರಯೋಗ: 30 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಹು-ಧಾ ಪೊಲೀಸರು
author img

By

Published : Mar 4, 2023, 4:56 PM IST

Updated : Mar 4, 2023, 7:55 PM IST

ಇ - ಪೋರ್ಟಲ್​ ನೂತನ ಪ್ರಯೋಗ: 30 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಹು - ಧಾ ಪೊಲೀಸರು

ಹುಬ್ಬಳ್ಳಿ : ಜನರು ಕಳೆದುಕೊಂಡ ಮತ್ತು ಕಳ್ಳತನವಾದ ಮೊಬೈಲ್‌ಗಳನ್ನು ಪತ್ತೆ ಹಚ್ಚಲು ಪೊಲೀಸ್​ ಇಲಾಖೆ ನೂತನ ಪ್ರಯೋಗ ಜಾರಿಗೊಳಿಸಿದೆ. ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಆರಂಭಿಸಿದ ಇ-ಪೋರ್ಟಲ್ ನಿಂದಾಗಿ ಈ ವಾರದಲ್ಲಿ ಸುಮಾರು ಮೂರು ಲಕ್ಷ ರೂ. ಮೌಲ್ಯದ 30 ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಹಿಂದೆ ಮೊಬೈಲ್ ಕಳೆದುಕೊಂಡವರು ಪೊಲೀಸ್ ಠಾಣೆಗೆ ಆಗಮಿಸಿ ದೂರ ನೀಡಬೇಕಿತ್ತು. ಇದರಿಂದ ಜನ ಸಾಮಾನ್ಯರ ಸಮಯ ವ್ಯರ್ಥವಾಗುತ್ತಿತ್ತು. ದೂರು ಸಲ್ಲಿಸಿದರೂ ಹಲವು ಬಾರಿ ಕಳೆದುಹೋದ ಮೊಬೈಲ್‌ಗಳು ಪತ್ತೆಯಾಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವಿನೂತನ ಪ್ರಯೋಗದ ಮೂಲಕ ಮೊಬೈಲ್ ಪತ್ತೆ ಕಾರ್ಯಾಚರಣೆಗೆ ಮುಂದಾಗಿದೆ.

ಈ ಹಿನ್ನೆಲೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದು ತಾಂತ್ರಿಕ ಕೊಠಡಿ ಆರಂಭಿಸಲಾಗಿದೆ. ಇಲ್ಲಿ ಡಿಸಿಪಿ ಗೋಪಾಲ ಬ್ಯಾಕೋಡ ಅವರ ಮಾರ್ಗದರ್ಶನದಲ್ಲಿ ನಾಲ್ಕು ಜನರ ತಂಡ ಕಾರ್ಯನಿರ್ವಹಿಸುತ್ತಿದೆ. 2022ರಿಂದ ಇತ್ತೀಚಿನವರೆಗೆ ಕಳೆದುಹೋದ ಮೊಬೈಲ್​ಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಪೊಲೀಸ್​ ಠಾಣೆಗೆ ಮರಳಿ ಮೊಬೈಲ್ ನೀಡಿದ ಬಹುತೇಕರು ಬೇರೆಯವರಿಂದ ಮೊಬೈಲ್ ಪಡೆದುಕೊಂಡವರಾಗಿದ್ದಾರೆ. ಮೊಬೈಲ್​ ಕಳೆದುಕೊಂಡ ವ್ಯಕ್ತಿಗಳ ಸಂದೇಶವನ್ನಾಧರಿಸಿ ಪೊಲೀಸರು ಪತ್ತೆ ಹಚ್ಚಿದ ಮೊಬೈಲ್​ಗಳನ್ನು ವಾರಸುದಾರರಿಗೆ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್​ ಕಳೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ ಸಾರ್ವಜನಿಕರ ದೂರನ್ನು ಪರಿಗಣಿಸಿ ಪೊಲೀಸರು ಮೊಬೈಲ್​ಗಳನ್ನು ಪತ್ತೆ ಹಚ್ಚುತ್ತಾರೆ. ಈ ವೇಳೆ ಕಳೆದುಹೋದ ಮೊಬೈಲ್​ ಹೊಂದಿರುವವರಿಗೆ ಪೊಲೀಸ್ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸುತ್ತಾರೆ. ಬಳಿಕ ಈ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಿ ಪೊಲೀಸರು ಕಳವಾದ ಮೊಬೈಲ್​ಗಳನ್ನು ಬಳಸುತ್ತಿರುವವರಿಂದ ಮರಳಿ ಪಡೆಯಲಾಗುತ್ತದೆ. ಕೆಲವರು ನೇರವಾಗಿ ಪೊಲೀಸ್​ ಠಾಣೆಗೆ ಬಂದು ಮೊಬೈಲ್​ಗಳನ್ನು ಒಪ್ಪಿಸಿದರೆ, ಇನ್ನು ಕೆಲವರು ಪೋಸ್ಟ್ ಮೂಲಕ ಆಯುಕ್ತರ ಕಚೇರಿಗೆ ಕಳುಹಿಸಿಕೊಡುತ್ತಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ನಿಜವಾಗಿಯೂ ಮೊಬೈಲ್ ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟಕರವಾಗಿದೆ. ಆದರೆ, ಪ್ರಮುಖವಾಗಿ ಮೊಬೈಲ್​ ಕಳೆದುಕೊಂಡ ಸಾರ್ವಜನಿಕರಿಗೆ ತಮ್ಮ ಮೊಬೈಲ್​ನ್ನು ಹುಡುಕಿ ಮರಳಿ ಕೊಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಹುಧಾ ನಗರ ಪೊಲೀಸ್​ ಆಯುಕ್ತ ರಮಣ ಗುಪ್ತಾ ಹೇಳಿದ್ದಾರೆ.

ಇ-ಪೋರ್ಟಲ್​ ಬಳಕೆ ಹೇಗೆ ? : ನಗರ ಪೊಲೀಸರು ಆರಂಭಿಸಿರುವ ಇ-ಪೋರ್ಟಲ್ ಬಳಕೆ ತುಂಬಾ ಸರಳವಾಗಿದೆ. ಮೊದಲು ಮೊಬೈಲ್ ಕಳೆದುಕೊಂಡವರು ಪೊಲೀಸ್​ ಇಲಾಖೆ ನೀಡಿರುವ ದೂರವಾಣಿ ಸಂಖ್ಯೆ(8277952828)ಗೆ ಹಾಯ್ ಎಂದು ಸಂದೇಶ ಕಳುಹಿಸಿಬೇಕು. ಈ ವೇಳೆ ಈ ಸಂಖ್ಯೆಯಿಂದ ಮರಳಿ ಒಂದು ವೆಬ್‌ಸೈಟ್ ಲಿಂಕ್ ಬರುತ್ತದೆ. ಈ ಲಿಂಕ್​ ಮೇಲೆ ಕ್ಲಿಕ್ ಮಾಡಿದರೆ ಒಂದು ವೆಬ್‌ ಸೈಟ್ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಕಳೆದುಕೊಂಡ ಮೊಬೈಲ್ ಬಗ್ಗೆ ಮಾಹಿತಿಯನ್ನು ತುಂಬಬೇಕು. ಇಲ್ಲಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಸಬ್ಮಿಟ್​ ಕೊಟ್ಟರೆ ಆಯಿತು. ಈ ಮಾಹಿತಿಯನ್ನು ಆಧಾರಿಸಿ ಪೊಲೀಸರು ಕಳೆದುಹೋದ ಮೊಬೈಲನ್ನು ಪತ್ತೆ ಹಚ್ಚುತ್ತಾರೆ. ಮೊಬೈಲ್ ಸಿಕ್ಕರೆ ವಾರಸುದಾರರಿಗೆ ಪೊಲೀಸರು ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ : ಮುತ್ತಿನ ನಗರಿಯಲ್ಲಿ ವಿದ್ಯಾರ್ಥಿ ಜೊತೆ ಶಿಕ್ಷಕಿ ನಾಪತ್ತೆ.. ಎರಡು ದಿನಗಳ ಬಳಿಕ ವಾಪಸ್ ಬಂದು ಹೇಳಿದ್ದೇನು​!?

Last Updated : Mar 4, 2023, 7:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.