ETV Bharat / state

ಎರಡು ದಿನ ಸಂಪೂರ್ಣ ಲಾಕ್​ಡೌನ್ ​: ಡ್ರೋನ್​ ಕ್ಯಾಮರಾದಲ್ಲಿ‌ ಧಾರವಾಡದ ದೃಶ್ಯ ಸೆರೆ

ಬೆಳಗ್ಗೆ 6 ರಿಂದ 8 ಗಂಟೆವರೆಗೆ ಮಾತ್ರ ದಿನಸಿ ವಸ್ತುಗಳ ಖರೀದಿಗೆ ಅವಕಾಶ ಮಾಡಲಾಗಿದೆ. ಬಳಿಕ ಕಟ್ಟುನಿಟ್ಟಿನ ಲಾಕಡೌನ್ ಜಿಲ್ಲೆಯಾದ್ಯಂತ ಜಾರಿ ಮಾಡಲಾಗುತ್ತಿದೆ..

dharwad
dharwad
author img

By

Published : May 23, 2021, 5:44 PM IST

ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ 2 ದಿನ ಸಂಪೂರ್ಣ ಲಾಕ್​ಡೌನ್​​ ಜಾರಿಗೊಳಿಸಲಾಗಿದೆ. ಲಾಕ್​ಡೌನ್​ನಿಂದಾಗಿ ಬಿಕೋ ಎನ್ನುತ್ತಿರುವ ರಸ್ತೆಗಳ ದೃಶ್ಯ ಡ್ರೋನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಧಾರವಾಡದ ಬಸ್ ನಿಲ್ದಾಣ, ಸಿಬಿಟಿ, ಕೆಸಿಡಿ ಸರ್ಕಲ್ ಸೇರಿದಂತೆ ಪ್ರಮುಖ ಮಾರುಕಟ್ಟೆ ಸ್ಥಳಗಳು ಅನೇಕ ರಸ್ತೆಗಳು ಜನರಿಲ್ಲದೇ ಬಣಗುಡುತ್ತಿದ್ದ ದೃಶ್ಯ ಡ್ರೋನ್​ ಕ್ಯಾಮೆರಾ ಸೆರೆ ಹಿಡಿದಿದೆ.

ಡ್ರೋನ್​ ಕ್ಯಾಮೆರಾದಲ್ಲಿ‌ ಧಾರವಾಡದ ದೃಶ್ಯ ಸೆರೆ

ವೈರಸ್ ಚೈನ್ ಬ್ರೇಕ್ ಮಾಡಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಹೊರಡಿಸಿರುವ ಸಂಪೂರ್ಣ ಲಾಕಡೌನ್‌ಗೆ ಧಾರವಾಡ‌ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ.

ಬೆಳಗ್ಗೆ 6 ರಿಂದ 8 ಗಂಟೆವರೆಗೆ ಮಾತ್ರ ದಿನಸಿ ವಸ್ತುಗಳ ಖರೀದಿಗೆ ಅವಕಾಶ ಮಾಡಲಾಗಿದೆ. ಬಳಿಕ ಕಟ್ಟುನಿಟ್ಟಿನ ಲಾಕಡೌನ್ ಜಿಲ್ಲೆಯಾದ್ಯಂತ ಜಾರಿ ಮಾಡಲಾಗುತ್ತಿದೆ. ಈ ವೀಕೆಂಡ್ ಲಾಕ್​ಡೌನ್​​ಗೆ ಧಾರವಾಡದ ಜನತೆ ಅಭೂತಪೂರ್ವ ಬೆಂಬಲ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.