ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಜೋಡೆತ್ತುಗಳಲ್ಲ, ಅವರು ಕಾದಾಟದ ಹೋರಿಗಳು. ಸಿಎಂ ಕುರ್ಚಿಗಾಗಿ ಬಡಿದಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಹಲವರ ಕೈವಾಡವಿದೆ. ಕಾಂಗ್ರೆಸ್ ನಾಯಕರು, ಕೆಲ ಸಂಘ ಸಂಸ್ಥೆಗಳು, ಬೇರೆ ಯಾರೆಲ್ಲ ಇದ್ದಾರೆ ಎನ್ನುವುದು ತನಿಖೆಯಿಂದ ಹೊರ ಬರಬೇಕಾಗಿದೆ. ಬಿಜೆಪಿ ಸರ್ಕಾರ ಬರಲು ಪಕ್ಷ ತೊರೆದು ಬಂದ ನಾಯಕರ ತೇಜೋವಧೆ ಯತ್ನ ನಡೆಯುತ್ತಿದೆ. ಹೀಗಾಗಿ 6 ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದರು.
ಸಿಡಿ ಅಂದರೆ ಕೂಡಲೇ ರಾಸಲೀಲೆ, ಹನಿಟ್ರ್ಯಾಪ್ ಅಲ್ಲ. ಫೋನ್ ಸಂಭಾಷಣೆ, ದಾಖಲಾತಿ ವಿಚಾರ ಸಹ ಸಿಡಿಯಲ್ಲಿ ಇರಬಹುದು. ತೇಜೋವಧೆ ಆದ ನಂತರ ನಾಯಕರ ಗೌರವ ಕಡಿಮೆ ಆಗುತ್ತದೆ. ಹೀಗಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಬಿಜೆಪಿ ಸರ್ಕಾರ ಹಾಗೂ ಸಚಿವರ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಓದಿ: 'ಟೆಕ್ನಾಲಜಿ ತುಂಬಾ ಬೆಳೆದಿದೆ, ಜಾರಕಿಹೊಳಿ ವಿಷಯದಲ್ಲಿ ಏನೇನು ಮಾಡಿದ್ದಾರೆ ಗೊತ್ತಿಲ್ಲ'
ಶ್ರೀರಾಮುಲು ಶಕ್ತಿ ಕುಂದಿಲ್ಲ, ನಾನು ರಾಜ್ಯ ಪ್ರವಾಸ ಮಾಡುತ್ತಾ ಅಭಿವೃದ್ಧಿ ಮಾಡುತ್ತಿದ್ದೇನೆ. ಸ್ಥಾನಮಾನ ನೀಡೋ ಬಗ್ಗೆ ನಾನು ಏನೂ ಕೇಳಲ್ಲ, ಬೇಸರವೂ ಸಹ ಇಲ್ಲ ಎಂದರು.