ಹುಬ್ಬಳ್ಳಿ : ಕಳೆದ ಬಾರಿಯ ನೆರೆ ಪರಿಹಾರವೇ ಇನ್ನೂ ಸಿಕ್ಕಿಲ್ಲ. ಮನೆ ಬಿದ್ದಿರೋದಕ್ಕೆ ₹5 ಲಕ್ಷ ಕೊಡ್ತೀನಿ ಅಂದಿದ್ರೂ ಏನೂ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕೊಡಲಿಲ್ಲ, ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ನೆರೆಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ. ಅವರೆಲ್ಲಾ ಪ್ರವಾಸ ಮಾಡಿ ರೆಸ್ಟ್ ಮಾಡಲಿ, ಜನ ಸಾಯ್ತಿದ್ದಾರೆ. ಮತದಾರರು ಮುಂದೆ ವೋಟ್ ಮಾಡುವಾಗ ಏನೆಂದು ತೋರಿಸುತ್ತಾರೆ. ಬಿಜೆಪಿಯಲ್ಲಿ ಸಚಿರಾಗಲು ಅವರು ಬಹಳ ಅರ್ಜೆಂಟ್ನಲ್ಲಿದ್ದಾರೆ. ಅವರಿಗೆ ರಾಜ್ಯದ ಜನರ ಹಿತ ಮುಖ್ಯವಲ್ಲ, ಅವರಿಗೆ ಪವರ್ ಬೇಕಾಗಿದೆ ಎಂದು ಕಿಡಿಕಾರಿದರು.