ETV Bharat / state

ಅನುಶ್ರೀ ವಿಷಯದಲ್ಲಿ ಮೂಗು ತೂರಿಸಿದ ರಾಜಕಾರಣಿ ಯಾರಂತ ಗೊತ್ತಿದೆಯಾ? ಮಾಧ್ಯಮದವರನ್ನೇ ಪ್ರಶ್ನಿಸಿದ ಡಿಕೆಶಿ

ನಟಿ ಅನುಶ್ರೀ ವಿಚಾರಣೆಗೆ ಹಾಜಾರಾದಾಗಿನಿಂದಲೂ ಈ ಪ್ರಕರಣದಲ್ಲಿ ರಾಜಕೀಯ ಪ್ರಭಾವಿಗಳ ಹಸ್ತಕ್ಷೇಪದ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತನಾಡಿದ್ದಾರೆ.

dk-shivakumar
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
author img

By

Published : Oct 3, 2020, 1:00 PM IST

ಧಾರವಾಡ: ಸ್ಯಾಂಡಲ್​ವುಡ್​ ಡ್ರಗ್ಸ್ ನಂಟು ಜಾಲ ಆರೋಪದಡಿ ವಿಚಾರಣೆಗೆ ಹಾಜರಾಗಿದ್ದ ನಟಿ, ಆ್ಯಂಕರ್ ಅನುಶ್ರೀ ಹಿಂದೆ ರಾಜಕಾರಣಿಗಳ ಹಸ್ತಕ್ಷೇಪ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಅನುಶ್ರೀ ಪರ ರಾಜಕೀಯ ನಾಯಕರ ಹಸ್ತಕ್ಷೇಪ ಕುರಿತು ಡಿಕೆಶಿ ಪ್ರತಿಕ್ರಿಯೆ

ಯಾವ ನಾಯಕರು? ನನಗೆ ಯಾರಿದ್ದರೋ ಗೊತ್ತಿಲ್ಲ, ಅವರ ಹೆಸರೇನಾದರೂ ನಿಮಗೆ ಗೊತ್ತಿದಿಯಾ? ಎಂದು ಪ್ರಶ್ನಿಸಿದರು. ಇನ್ನು ಇದೇ ವೇಳೆ ಪ್ರವಾಹ ಪರಿಹಾರ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸರ್ಕಾರ ಕಳೆದ ವರ್ಷದ ಪರಿಹಾರ ಬಾಕಿಯನ್ನೇ ಕೊಟ್ಟಿಲ್ಲ ಈ ವರ್ಷಕ್ಕೆ ದೇವರೇ ಗತಿ ಅಂತಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ಹೇಳಿದ್ದಾರೆ ಎಂದರು.

ಬಳಿಕ ಧಾರವಾಡ ಕೇಂದ್ರ ಕಾರಾಗೃಹ ಆವರಣದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ, ಕರೆಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿರುವ ವೈದ್ಯಕೀಯ ಸಿಬ್ಬಂದಿಯ ಸಮಸ್ಯೆ ಆಲಿಸಿದರು. ಅಲ್ಲದೆ ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.