ETV Bharat / state

ವೈದ್ಯಕೀಯ ಕ್ಲೇಮ್​ ತಿರಸ್ಕರಿಸಿದ ಎಲ್​ಐಸಿಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ - consumer court

ಪಾಲಿಸಿ ಹೊಂದಿದ್ದರು ವೈದ್ಯಕೀಯ ಕ್ಲೇಮ್​ ತಿರಸ್ಕರಿಸಿದ ಎಲ್​ಐಸಿಗೆ, ಜಿಲ್ಲಾ ಗ್ರಾಹಕರ ಆಯೋಗವು ದಂಡ ವಿಧಿಸಿದೆ.

KN_DWD_5
ಎಲ್​ಐಸಿಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ
author img

By

Published : Oct 11, 2022, 10:37 PM IST

ಧಾರವಾಡ: ಎಲ್​ಐಸಿ ಪಾಲಿಸಿ ಹೊಂದಿದ್ದರೂ, ಗ್ರಾಹಕರಿಗೆ ವೈದ್ಯಕೀಯ ಕ್ಲೇಮ್​ ತಿರಸ್ಕರಿಸಿ, ಸರಿಯಾಗಿ ಸ್ಪಂದಿಸದೇ ಸೇವಾ ನ್ಯೂನ್ಯತೆ ಎಸಗಿದೆ ಎಂದು ಎಲ್​ಐಸಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.

ಸ್ಥಳೀಯ ಎಂ.ಬಿ.ನಗರದ ನಿವಾಸಿ ಪ್ರಮಥನಾಥ ಮತ್ತು ಶ್ರೀದೇವಿ ಪಾವಟೆ ಎಂಬ ದಂಪತಿಗಳು ತಾವು ಈ ಹಿಂದೆ ಅಕ್ಟೋಬರ್ 30, 2008 ರಂದು 10 ವರ್ಷದ ಅವಧಿಯ ಎಲ್ಐಸಿ ಹೆಲ್ತ್ ಪ್ಲಸ್ ಪಾಲಿಸಿ (ವೈದ್ಯಕೀಯ ವಿಮೆ) ಖರೀದಿಸಿದ್ದರು. ಶ್ರೀದೇವಿ ಅವರು ಅಕ್ಟೋಬರ್ 30, 2008 ರಂದು ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ದಾಖಲಾಗಿ ಕಿಬ್ಬೊಟ್ಟೆಯ ಸಮಸ್ಯೆಗಾಗಿ ರೂ.79,216 ಭರಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ವೈದ್ಯಕೀಯ ವೆಚ್ಚವನ್ನು ತನಗೆ ಪಾವತಿಸುವಂತೆ ಎಲ್ಐಸಿ ಆಫ್ ಇಂಡಿಯಾಗೆ ತಮ್ಮ ಪಾಲಿಸಿ ಆಧಾರದಲ್ಲಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.

ಆದರೆ, ಎಲ್ಐಸಿಯು ತಮ್ಮ ಕ್ಲೇಮ್ ಅನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಿ, ಸೇವಾ ನ್ಯೂನ್ಯತೆ ಎಸಗಿದೆ ಎಂದು ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ.ಕ.ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು, ಎಲ್​ಐಸಿಯ ಫಿರ್ಯಾದಿದಾರರು ಪಾಲಿಸಿ ಹೊಂದಿದ್ದರು.

ಅವರಿಗೆ ಸರಿಯಾಗಿ ಸ್ಪಂದಿಸದೇ ಸೇವಾ ನ್ಯೂನ್ಯತೆ ಎಸಗಿದೆ ಅಂತಾ ಅಭಿಪ್ರಾಯಪಟ್ಟು ದೂರುದಾರರ ವೈದ್ಯಕೀಯ ವೆಚ್ಚ ರೂ.79,216 ಗಳನ್ನು ಮತ್ತು ಅವರ ಕ್ಲೇಮ್ ತಿರಸ್ಕರಿಸಿದ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ಶೇ.8ರ ಬಡ್ಡಿ ಸಮೇತ ಕೊಡಬೇಕು.

ದೂರುದಾರರಿಗೆ ಆಗಿರುವ ಮಾನಸಿಕ ಹಿಂಸೆ, ಅನಾನುಕೂಲತೆಗಾಗಿ ರೂ.50 ಸಾವಿರಗಳ ಪರಿಹಾರದ ಜೊತೆಗೆ ಪ್ರಕರಣದ ಖರ್ಚು ಅಂತಾ ರೂ.10 ಸಾವಿರಗಳನ್ನು ಕೊಡಬೇಕು ಅಂತಾ ತೀರ್ಪು ನೀಡಿ ಆದೇಶಿಸಿದೆ.

ಇದನ್ನೂ ಓದಿ: ಅಪ್ರಾಪ್ತ ಮಗನಿಗೆ ವಾಹನ ಕೊಟ್ಟ ತಾಯಿ.. 25,500 ರೂ ದಂಡ ವಿಧಿಸಿದ ನ್ಯಾಯಾಲಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.