ಹುಬ್ಬಳ್ಳಿ : ಮೂರುಸಾವಿರ ಮಠದ ಉತ್ತರಾಧಿಕಾರಿ ನಾನೇ. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಾಳೆ ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿ, ನನ್ನ ವಿರುದ್ಧ ಇಲ್ಲಸಲ್ಲದ, ಆರೋಪ ಮಾಡಿ ತೇಜೋವಧೆ ಮಾಡಲಾಗುತ್ತಿದೆ. ಎಲ್ಲರೂ ಸೇರಿಯೇ ನನ್ನನ್ನು ಮೂರು ಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೆ. ಉತ್ತರಾಧಿಕಾರಿಯಾಗುವಂತೆ ಮಠದ ಪ್ರಮುಖರೇ ನನ್ನನ್ನು ಆಹ್ವಾನಿಸಿದ್ದರು. ಬಸವರಾಜ್ ಹೊರಟ್ಟಿ, ಮೋಹನ ಲಿಂಬಿಕಾಯಿ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಶಂಕರಣ್ಣ ಮುನವಳ್ಳಿ ಇದಕ್ಕೆ ಉತ್ತರಿಸಬೇಕು. ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿಯಾಗಲು ನಾನಾಗಿ ಬಂದಿದ್ದಾ ಅಥವಾ ಅವರಾಗಿಯೇ ಕರೆದಿದ್ರಾ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
2009 ರಿಂದ ಇಲ್ಲಿ ತನಕ ಮಠದಲ್ಲಿ ನಡೆದ ಬೆಳವಣಿಗೆ ಬಗ್ಗೆ ಎಲ್ಲರೂ ಉತ್ತರಿಸಲಿ. ನನ್ನ ವಿರುದ್ಧ ಇಲ್ಲಸಲ್ಲದ, ಆರೋಪ ಮಾಡಿ ತೆಜೋವಧೆ ಮಾಡಲಾಗುತ್ತಿದ್ದೆ. ನಾನೇ ಉತ್ತರಾಧಿಕಾರಿ ಆಗಲು ಪ್ರಯತ್ನಿಸಿದೆ ಎಂದು ಬಿಂಬಿಸುತ್ತಿದ್ದಾರೆ. ಹಾಲಿ ಪೀಠಾಧೀಶ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ನನ್ನನ್ನು ಮೂರು ಸಾವಿರ ಮಠಕ್ಕೆ ಬರಬೇಕೆಂದು ಮನವೊಲಿಸಿದ್ದು, ಅಲ್ಲದೆ ನನನ್ನು ಉತ್ತರಾಧಿಕಾರಿ ಮಾಡಲು 52 ಜನ ಪ್ರಮುಖರು ಸಹಿ ಹಾಕಿದ್ದಾರೆ. ಅವರೆಲ್ಲ ಬಂದು ಗುರುಸಿದ್ದೇಶ್ವರ ಕತೃಗದ್ದುಗೆ ಮುಟ್ಟಿ ಸತ್ಯ ನುಡಿಯಲಿ ಎಂದು ಸವಾಲು ಹಾಕಿದರು.