ETV Bharat / state

ಬಿಎಸ್​ವೈ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ: ದಿಂಗಾಲೇಶ್ವರ ಸ್ವಾಮೀಜಿ - ಬಿಎಸ್​ವೈ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ

''ಸಮರ್ಥ, ಯೋಗ್ಯ ವ್ಯಕ್ತಿ ಸಿಎಂ ಆಗಬೇಕು. ಕರ್ನಾಟಕ‌ವನ್ನು ಒಂದೇ ದೃಷ್ಟಿಕೋನದಲ್ಲಿ ನೋಡುವವರು ಸಿಎಂ ಆಗಬೇಕು '' ಎಂದು ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯಿಸಿದ್ದಾರೆ.

Dingaleshwar Swamiji
ದಿಂಗಾಲೇಶ್ವರ ಸ್ವಾಮೀಜಿ
author img

By

Published : May 15, 2023, 3:48 PM IST

Updated : May 15, 2023, 4:02 PM IST

ಶಿರಹಟ್ಟಿ ಮಠದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು.

ಹುಬ್ಬಳ್ಳಿ: ''ನಾನು ಈ ಹಿಂದೆ ಯಡಿಯೂರಪ್ಪನವರ ಕಣ್ಣೀರಿನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗುತ್ತದೆ ಎಂದಿದ್ದೆ‌. ಇವತ್ತು ಆ ಪಕ್ಷದ ನಾಯಕರಿಗೆ ಇದು ಅರಿವಾಗಿದೆ. ಅಧಿಕಾರ ಬಂದ ಸಂದರ್ಭದಲ್ಲಿ ಆ ಪಕ್ಷದ ನಾಯಕರನ್ನು ನಿರ್ಲಕ್ಷ್ಯ ಮಾಡಿದ್ರೆ ತಿನ್ನಬಾರದ ಪೆಟ್ಟು ತಿನ್ನುತ್ತಾರೆ'' ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ನೂಲ್ವಿ ಹೊರವಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾನು ಅವತ್ತು ಒಬ್ಬ ವ್ಯಕ್ತಿ ಉದ್ದೇಶಿಸಿ ಮಾತಾಡಿರಲಿಲ್ಲ. ಯಡಿಯೂರಪ್ಪ ಎಲ್ಲರಿಗೂ ಬೇಕಾದ ನಾಯಕರು. ಅವತ್ತು ಎಲ್ಲ ಸಮಾಜದ ನಾಯಕರು ಯಡಿಯೂರಪ್ಪರನ್ನು ಮುಂದುವರಿಸಬೇಕು ಎಂದಿದ್ದರು. ಯಾವುದೋ ಕೆಟ್ಟ ಉದ್ದೇಶ ಅಥವಾ ಸ್ವಾರ್ಥಕ್ಕೆ ತೆಗೆದುಕೊಂಡ ನಿರ್ಣಯ ಇಂದಿನ ಹೀನಾಯ ಪರಿಸ್ಥಿತಿಗೆ ಕಾರಣವಾಗಿದೆ'' ಎಂದರು.

ಪರೋಕ್ಷವಾಗಿ ಬಿ. ಎಲ್. ಸಂತೋಷ್ ವಿರುದ್ಧ ಆಕ್ರೋಶ: ಬಿಜೆಪಿ ಚಿಂತನ‌ ಮಂಥನ ಮಾಡಬೇಕಿತ್ತು. ಕೇಸರಿ ಪಡೆ ಎಂದು ಹೇಳಿ ಅಧಿಕಾರಕ್ಕೆ ಬಂದು, ಖಾವಿಧಾರಿಗಳನ್ನ‌ ಸರಿಯಾಗಿ ನಡೆಸುಕೊಳ್ಳಲಿಲ್ಲ. ಖಾವಿದಾರಿಗಳು ಪಾಠ ಮಾಡಿದ್ರು, ಅವರು ಪಾಠ ಕಲಿಲಿಲ್ಲ. ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿದ್ದೇ ಬಿಜೆಪಿ‌ಯ ಇಂದಿನ ಸ್ಥಿತಿಗೆ ಕಾರಣ. ಯಡಿಯೂರಪ್ಪ, ಸವದಿ, ಶೆಟ್ಟರ್, ಈಶ್ವರಪ್ಪ ಅವರನ್ನು ಕಡೆಗಣಿಸಿರುವುದು ಇದಕ್ಕೆಲ್ಲ ‌ಕಾರಣ. ಪಕ್ಷ ಕಟ್ಟದ ವ್ಯಕ್ತಿ ಮಾತ ಕೇಳಬೇಕು ಅಂದ್ರೆ ಏನು..?'' ಎಂದು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಯಾರ ಅಂಕುಶವೂ ಇಲ್ಲ-ದಿಂಗಾಲೇಶ್ವರ ಶ್ರೀ: ''ಯಡಿಯೂರಪ್ಪ ಸಿಎಂ ಇದ್ದಾಗ ಹೀಗೆ ಮಾಡಿದ್ರು, ಯಡಿಯೂರಪ್ಪ ಕೆಳಗಿಳಿಸೋವಾಗ ಹೇಗೆ ನಡೆಸಿಕೊಂಡರು ಅನ್ನೋದು ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಚುನಾವಣೆ ‌ಒಂದೇ ಮಾಡಿದ್ರು. ಜಗದೀಶ್ ಶೆಟ್ಟರ್, ಸವದಿಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು'' ಎಂದ ಅವರು, ''ಬ್ರಾಹ್ಮಣ ವಿಚಾರವಾಗಿ ನಾನು ಆರು ತಿಂಗಳ ನಂತರ ಮಾಧ್ಯಮಗೋಷ್ಟಿ ಮಾಡ್ತೀನಿ. ರಾಜ್ಯದಲ್ಲಿ ಏನಾಗಿದೆ. ಅನ್ನೋ ದಾಖಲೆ ಇವೆ. ಅವರ ಬಗ್ಗೆ ಮಾತಾಡೋಕೆ ನನಗೆ ಭಯ ಇಲ್ಲ. ನನಗೆ ಯಾರ ಅಂಕುಶವೂ ಇಲ್ಲ'' ಎಂದು ಸ್ವಾಮೀಜಿ ಗುಡುಗಿದರು.

ಅವರದ್ದು ಅವರೇ ಉಂಡಿದ್ದಾರೆ- ಸ್ವಾಮೀಜಿ ಆಕ್ರೋಶ: ''ಬಹಳ ಮಾತಾಡಿ ಉಪಯೋಗ ಇಲ್ಲ. ರಾಜ್ಯದ ನಾಯಕರನ್ನು ಬಹಳ‌ ಕೆಟ್ಟ ರೀತಿಯಲ್ಲಿ‌ ನಡೆಸಿಕೊಂಡಿದ್ದಾರೆ. ಅವರದ್ದು ಅವರೇ ಉಂಡಿದ್ದಾರೆ. ದಕ್ಷಿಣದ ಭಾರತದ ಕುದುರೆಗಳನ್ನು ಕತ್ತೆ ಅಂದುಕೊಂಡಿದ್ದೇ ಇದಕ್ಕೆಲ್ಲ ಕಾರಣ. ಕರ್ನಾಟಕದ ನಾಯಕರನ್ನು ಬಿಟ್ಟು ಏನಾದರೂ ಮಾಡ್ತೀನಿ ಅಂದುಕೊಂಡರು. ರಾಜ್ಯದ ಮತದಾರರು ಬುದ್ಧಿಗೇಡಿಗಳಾ, ರಾಷ್ಟ್ರ ನಾಯಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ರಾಜ್ಯವನ್ನು ಸರಿಯಾದ ರೀತಿ ನಡೆಸುವ ವ್ಯಕ್ತಿ ಸಿಎಂ ಆಗಬೇಕು'' ಎಂದ ಸ್ವಾಮೀಜಿ ಆಗ್ರಹಿಸಿದರು.

ಸಮರ್ಥ, ಯೋಗ್ಯ ವ್ಯಕ್ತಿ ಸಿಎಂ ಆಗಬೇಕು: ''ಸಮರ್ಥ, ಯೋಗ್ಯ ವ್ಯಕ್ತಿ ಸಿಎಂ ಆಗಬೇಕು. ಕರ್ನಾಟಕ‌ವನ್ನು ಒಂದು ದೃಷ್ಟಿಕೋನದಲ್ಲಿ ನೋಡುವವರು ಸಿಎಂ ಆಗಬೇಕು. ಲಿಂಗಾಯತ ನಾಯಕನಿಗೆ ಉಪಮುಖ್ಯಮಂತ್ರಿ ‌ನೀಡಬೇಕು. ಲಿಂಗಾಯತ ಸಮುದಾಯದ ಉತ್ತರ ಕರ್ನಾಟಕದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಇದು ನಮ್ಮ ಅಭಿಪ್ರಾಯ'' ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: 135 ಸ್ಥಾನಗಳೇ ನನಗೆ ರಾಜ್ಯದ ಜನರು ನೀಡಿದ ಜನ್ಮದಿನದ ಬಹುದೊಡ್ಡ ಗಿಫ್ಟ್​: ಡಿ.ಕೆ.ಶಿವಕುಮಾರ್​

Last Updated : May 15, 2023, 4:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.