ಧಾರವಾಡ: ಅಮೆರಿಕದಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಭಾರತ ಮೂಲದ ವ್ಯಕ್ತಿ ಮತದಾನ ಮಾಡಲು ಸ್ವದೇಶಕ್ಕೆ ಬಂದಿದ್ದಾರೆ.
ನಿಹಾಲ್ ಸಶಿತ್ತಲ ಹಾಗೂ ತಾಯಿ ಮಂಗಳಾ ಧಾರವಾಡಕ್ಕೆ ಆಗಮಿಸಿ ನಗರದ ಸಾರಸ್ವತಪುರ ಮಾಡರ್ನ್ ಶಾಲೆಯಲ್ಲಿ ಮತ ಚಲಾಯಿಸಿದರು.
ಮತದಾನ ಮಾಡುವ ಸಲುವಾಗಿಯೇ ಭಾರತಕ್ಕೆ ಬಂದಿಳಿದ ನಿಹಾಲ್, ಬೆಂಗಳೂರಿನಲ್ಲಿದ್ದ ತನ್ನ ತಾಯಿಯನ್ನೂ ಮತದಾನಕ್ಕೆ ಕರೆದುಕೊಂಡು ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.