ETV Bharat / state

ನೆರೆ ಪರಿಹಾರ ಚೆಕ್ ವಿತರಣೆಯಲ್ಲಿ ಗೋಲ್ ​ಮಾಲ್...​ ಗ್ರಾಮ ಲೆಕ್ಕಾಧಿಕಾರಿ ಸಸ್ಪೆಂಡ್ - Dharwad News

ಮಳೆಯಿಂದ ಮನೆ ಹಾನಿಯಾದ ಫಲಾನಿಭವಿಗಳಿಗೆ ಚೆಕ್ ನೀಡದೆ, ಇತರರಿಗೆ ಪರಿಹಾರ ಧನ ವಿತರಿಸಿದ ಆರೋಪದ ಮೇಲೆ ಗ್ರಾಮ ಲೆಕ್ಕಾಧಿಕಾರಿ ರಮೇಶ ಮಾನೆಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.

ಗ್ರಾಮ ಲೆಕ್ಕಾಧಿಕಾರಿ ಸಸ್ಪೆಂಡ್
author img

By

Published : Sep 12, 2019, 4:58 AM IST

ಧಾರವಾಡ: ಮಳೆ ಹಾನಿಯಿಂದ ಮನೆ ಕಳೆದುಕೊಂಡವರಿಗೆ ನೀಡಲಾಗುವ ಪರಿಹಾರದ ಚೆಕ್ ವಿತರಿಸುವ ವೇಳೆ ಅವ್ಯವಹಾರವೆಸಗಿದ ಆರೋಪದ ಮೇಲೆ ಗ್ರಾಮ ಲೆಕ್ಕಾಧಿಕಾರಿಯನ್ನು ವಜಾಗೊಳಿಸಿದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.

ಶಿರೂರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ರಮೇಶ ಮಾನೆ ವಜಾಗೊಂಡ ಅಧಿಕಾರಿ, ನೆರೆ ಪರಿಹಾರ ಚೆಕ್ ನೀಡುವಲ್ಲಿ ಗೋಲ್‌ ಮಾಲ್ ಕುರಿತು ವರದಿಯಿಂದ ಎಚ್ಚೆತ್ತುಕೊಂಡ ಉಪ ತಹಶೀಲ್ದಾರ್​ ಎಂ.ಜೆ. ವರ್ಕಾನಿ ಗ್ರಾಮಕ್ಕೆ ಭೇಟಿ ನೀಡಿ ಅಮಾನತುಗೊಳಿಸಿದ್ದಾರೆ.

ನೆರೆ ಪರಿಹಾರ ಚೆಕ್ ಗೋಲ್ ​ಮಾಲ್​ ಗ್ರಾಮ ಲೆಕ್ಕಾಧಿಕಾರಿ ಸಸ್ಪೆಂಡ್

ಮಳೆಯಿಂದ ಮನೆ ಹಾನಿಯಾದ ಫಲಾನುಭವಿಗಳಿಗೆ ಚೆಕ್ ನೀಡದೆ, ಇತರರಿಗೆ ಪರಿಹಾರ ಧನ ವಿತರಿಸಿದ ಆರೋಪದ ಮೇಲೆ ರಮೇಶ ಮಾನೆಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದ್ದು, ರಮೇಶ ಮಾನೆಯ ಅವ್ಯವಹಾರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು, ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಉಪ ತಹಶಿಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.

ಇನ್ನು, ಸರಿಯಾದ ಫಲಾನುಭವಿಗಳನ್ನು ಮತ್ತೊಮ್ಮೆ ಸರ್ವೆ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಗ್ರಾಮದಲ್ಲಿ ಹಾನಿಯಾದ ಮನೆ‌ ಮಾಲೀಕರಿಗೆ ಒಂದು ವಾರದಲ್ಲಿ ಚೆಕ್ ನೀಡುವುದಾಗಿ ಉಪ ತಹಸಿಲ್ದಾರ್​ ತಿಳಿಸಿದ್ದಾರೆ.

Intro:ಧಾರವಾಡ: ಮಳೆಯಿಂದ ಹಾನಿಯಾದ ಮನೆ ಮಾಲೀಕರಿಗೆ ಚೆಕ್ ನೀಡುವಲ್ಲಿ ಗೊಲ್‌ಮಾಲ್ ಮಾಡಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದ ಗ್ರಾಮಲೆಕ್ಕಾಧಿಕಾರಿ ರಮೇಶ ಮಾನೆ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ನೆರೆ ಪರಿಹಾರ ಚೆಕ್ ನೀಡುವಲ್ಲಿ ಗೋಲ್‌ ಮಾಲ್ ಕುರಿತು ವರದಿಯಿಂದ ಎಚ್ಚೆತ್ತಕೊಂಡ ಉಪತಹಶೀಲ್ದಾರ ಎಂ.ಜೆ. ವರ್ಕಾನಿ ಗ್ರಾಮಕ್ಕೆ ಭೇಟಿ ನೀಡಿ ಅಮಾನತು ಮಾಡಿದ್ದಾರೆ.

ಮಳೆಯಿಂದ ಹಾನಿಯಾದ ಮನೆಗಳ ಪರಿಹಾರ ಚೆಕ್ ನೀಡುವಲ್ಲಿ ಗೋಲ್ ಮಾಲ್ ಎಂದು ಮಾಧ್ಯಮಗಳು ವರದಿ ಬಿತ್ತರಿಸಲಾಗಿತ್ತು. ಹಾನಿಯಾದ ಮನೆಗಳಿಗೆ ಚೆಕ್ ನೀಡದೇ ಮನೆ ಬಿಳದೆ ಇರುವ ಮನೆ ಮಾಲೀಕರಿಗೆ ಚೆಕ್‌ ನೀಡಿದ್ದ ಆರೋಪದ ಮೇಲೆ ರಮೇಶ ಮಾನೆ ಅವರನ್ನು ಇಂದು ಸಸ್ಪೆಂಡ್ ಮಾಡಲಾಗಿದೆ.Body:ಸರಿಯಾದ ಫಲಾನುಭವಿಗಳನ್ನು ಮತ್ತೊಮ್ಮೆ ಸರ್ವೆ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಗ್ರಾಮದಲ್ಲಿನ ಹಾನಿಯಾದ ಮನೆ‌ ಮಾಲೀಕರಿಗೆ ಒಂದು ವಾರದಲ್ಲಿ ಚೆಕ್ ನೀಡುವುದಾಗಿ ಉಪತಹಸಿಲ್ದಾರ ಎಂ.ಜೆ. ವರ್ಕಾನಿ ತಿಳಿಸಿದ್ದಾರೆ.

ಬೈಟ್: ಎಂ.ಜೆ. ವರ್ಕಾನಿ, ಉಪತಹಶೀಲ್ದಾರ

ಬೈಟ್: ಮಲಕಾಜಿಗೌಡ ಪವಾಡಿಗೌಡ, ಗ್ರಾಮಸ್ಥರು...Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.