ಧಾರವಾಡ: ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರೆಲ್ಲ ಆಗಾಗ ಪ್ರವಾಸ ಮಾಡುವ ಹವ್ಯಾಸವುಳ್ಳವರು. ಆದರೆ ಇದೇ ಮೊದಲ ಬಾರಿಗೆ ಅವರು ನೈಟ್ ಜರ್ನಿ ಮಾಡಿದ್ದರು ಎಂದು ದುರ್ಘಟನೆಯಲ್ಲಿ ಮೃತಪಟ್ಟ ಡಾ.ಪ್ರೀತಿ ಅವರ ಮೈದುನ ಅರವಿಂದ ಹೇಳಿದರು.
ಮಹಿಳಾ ವೈದ್ಯರು ಹಾಗೂ ವೈದ್ಯರ ಪತ್ನಿಯರ ಸ್ನೇಹ ಬಳಗ ಈಗಾಗಲೇ ಸಾಕಷ್ಟು ಬಾರಿ ಪ್ರವಾಸ ಕೈಗೊಂಡಿದ್ದರು. ಈ ಹಿಂದೆ ಒಂದೆರಡು ದಿನಗಳ ಪ್ರವಾಸಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.