ಧಾರವಾಡ : ತಾಲೂಕಿನ ನುಗ್ಗಿ ಕೇರಿ ಕೋಡಿ ತುಂಬಿ ಹರಿಯುತಿದ್ದು, ಪರಿಣಾಮ ಜನರು ರಸ್ತೆ ಮೇಲೆ ಮೀನು ಹಿಡಿಯುತ್ತಿದ್ದಾರೆ.
ಧಾರಾಕಾರ ಮಳೆಯಿಂದ ಧಾರವಾಡ - ಕಲಘಟಗಿ ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ.
ಇದರಿಂದಾಗಿ ರಭಸದಿಂದ ಹರಿಯುತ್ತಿರುವ ನೀರಿನ ಮಧ್ಯೆಯೇ ಸ್ಥಳೀಯರು ಮೀನು ಹಿಡಿಯುವುದರಲ್ಲಿ ನಿರತರಾಗಿರುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿದೆ.