ಧಾರವಾಡ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ಗಳಲ್ಲಿ ವಿವಿಧ ಕಾರಣಗಳಿಂದಾಗಿ ತೆರವಾಗಿದ್ದ ಸ್ಥಾನಗಳಿಗೆ ಮಾರ್ಚ್ 29 ರಂದು ಜರುಗಿದ ಉಪಚುನಾವಣೆಯ ಮತ ಎಣಿಕೆ ಕಾರ್ಯವು ಬುಧವಾರ ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು.
ಹುಬ್ಬಳ್ಳಿ ತಾಲೂಕಿನ ಕಟ್ನೂರ ಗ್ರಾಮ ಪಂಚಾಯತ್ ಕಟ್ನೂರ ಗ್ರಾಮದ ಎರಡು ವಾರ್ಡ್‍ಗಳಿಗೆ ಜರುಗಿದ ಉಪ ಚುನಾವಣೆಯಲ್ಲಿ ಒಟ್ಟು 5 ಸ್ಥಾನಗಳಿಗೆ ಗಿರಿಜವ್ವ ಸುರೇಶ ಸಣ್ಣಮನಿ (ಪ.ಜಾತಿ ಮಹಿಳೆ), ಶೈಲಾ ರಾಣಪ್ಪ ಜಾಧವ (ಸಾಮಾನ್ಯ ಮಹಿಳೆ) ಹಾಗೂ ಕುಂದಗೋಳ ಹಜರತಲಿ ಇಬ್ರಾಹಿಂಸಾಬ (ಸಾಮಾನ್ಯ), ಮಂಜುನಾಥ ಬಸಪ್ಪ ಸಣ್ಣಮನಿ (ಪ.ಜಾತಿ), ಛಬ್ಬಿ ಶಶಿಕಲಾ ಮಂಜುನಾಥ (ಸಾಮಾನ್ಯ ಮಹಿಳೆ) ಆಯ್ಕೆಯಾಗಿದ್ದಾರೆ.
ಕುಂದಗೋಳ ತಾಲೂಕಿನ ಮಳಲಿ ಗ್ರಾಮ ಪಂಚಾಯತ್ನ ತೀರ್ಥ ಗ್ರಾಮದ ವಾರ್ಡ್‍ಗೆ ಜರುಗಿದ ಉಪ ಚುನಾವಣೆಯಲ್ಲಿ ಬೆಂಡಿಗೇರಿ ಮಂಜುನಾಥ ಯಲ್ಲಪ್ಪ (ಸಾಮಾನ್ಯ ಅಭ್ಯರ್ಥಿ) ಆಯ್ಕೆಯಾಗಿದ್ದಾರೆ.
ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮ ಪಂಚಾಯತಿಯ ಅಮರಗೋಳದ 2 ವಾರ್ಡ್‍ಗಳಿಗೆ ಜರುಗಿದ ಉಪಚುನಾವಣೆಯಲ್ಲಿ ಒಟ್ಟು 7 ಸ್ಥಾನಗಳಿಗೆ ಈರಪ್ಪ ನಾಗಪ್ಪ ಕಿತ್ಲಿ (ಹಿಂ.ಅ. ವರ್ಗ), ದೇವಕ್ಕ ದುರಗಪ್ಪ ಮಾದರ (ಅನುಸೂಚಿತ ಜಾತಿ ಮಹಿಳೆ), ಮಡಿವಾಳಪ್ಪ ವಿಠ್ಠಲ ಲಾಡರ್ (ಸಾಮಾನ್ಯ), ಸುಮಿತ್ರಾ ಮಾರುತಿ ಕರಾಂಡೆ (ಸಾಮಾನ್ಯ ಮಹಿಳೆ), ನಾಗಪ್ಪ ಮಲ್ಲಪ್ಪ ಜಗಾಪೂರ (ಹಿಂ.ಅ.ವರ್ಗ), ಸರೋಜಾ ಬಸವರಾಜ ಕುರಿ (ಹಿ.ವ. ಅ. ಮಹಿಳೆ), ಹನುಮಂತಗೌಡ ಭರಮಗೌಡ ಶಿವನಗೌಡ್ರ (ಸಾಮಾನ್ಯ) ಆಯ್ಕೆಯಾಗಿದ್ದಾರೆ.
ಮತ ಎಣಿಕೆ ಕಾರ್ಯವು ಆಯಾ ತಹಶೀಲ್ದಾರ ನೇತೃತ್ವದಲ್ಲಿ ಶಾಂತಿಯುತವಾಗಿ ಜರುಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.