ಧಾರವಾಡ : ಮಹದಾಯಿ ನದಿಯ ಉಪನದಿಯಂತಿರುವ ಕಳಸಾ ಬಂಡೂರಿ ನಾಲೆ ತುಂಬಿ ಹರಿಯುತ್ತಿದ್ದು, ನಾಲೆಗೆ ಜಿಲ್ಲೆಯ ರೈತರು ಬಾಗಿನ ಅರ್ಪಿಸಲು ಮುಂದಾಗಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಹಾಗೂ ರೈತ ಮಹಿಳೆಯರು ಖಾಸಗಿ ಬಸ್ ಮೂಲಕ ಧಾರವಾಡದಿಂದ ಬೆಳಗಾವಿ ಜಿಲ್ಲೆ ಖಾನಾಪೂರದತ್ತ ಪ್ರಯಾಣಿಸಿದ್ದಾರೆ. ರೈತರು ಖಾನಾಪೂರ ತಾಲೂಕಿನ ಜಾಂಬೋಟಿ ಬಳಿಯ ಕಳಸಾ ಬಂಡೂರಿ ನಾಲೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಕಾರ್ಯಕ್ರಮವಿದೆ. ಕಳಸಾ ಬಂಡೂರಿ ನಾಲೆಗಳು ಸದ್ಯ ನದಿಯ ಸ್ವರೂಪದಲ್ಲಿ ಹರಿಯುತ್ತಿದ್ದು, ಇವುಗಳನ್ನು ಮಲಪ್ರಭಾ ನದಿಗೆ ಸೇರಿಸಿದ್ದಲ್ಲದೇ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗೆ ನೀರಿನ ಬವಣೆ ನೀಗಿಸಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಆದಷ್ಟು ಬೇಗ ಮಲಪ್ರಭೆಗೆ ಸೇರುವಂತಾಗಲಿ ಎಂದು ಪ್ರಾರ್ಥಿಸುವ ನಿಟ್ಟಿನಲ್ಲಿ ಈಗ ಧಾರವಾಡ ರೈತರು ಬಾಗಿನ ಅರ್ಪಿಸಲು ತೆರಳಿದ್ದಾರೆ.