ಹುಬ್ಬಳ್ಳಿ : ಲಾಕ್ಡೌನ್ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಅನೇಕ ರೈತರು ಬೆಳೆ ನಾಶ ಮಾಡುತ್ತಿದ್ದಾರೆ. ಇದನ್ನು ಮನಗಂಡ ಕಾಂಗ್ರೆಸ್ ನಾಯಕರೊಬ್ಬರು ರೈತರ ನೆರವಿಗೆ ಬಂದಿದ್ದಾರೆ.
ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ರೈತರ ಹೊಲಗಳಿಗೆ ಭೇಟಿ ನೀಡಿ ಹಲವು ಬಗೆಯ ತರಕಾರಿಗಳನ್ನು ನೇರವಾಗಿ ಖರೀದಿಸಿ ಸಂಕಷ್ಟದಲ್ಲಿರುವ ಬಡ ಜನರಿಗೆ ಉಚಿತವಾಗಿ ಹಂಚಿದ್ದು, ಈ ಮೂಲಕ ರೈತರು ಮತ್ತು ಬಡ ಜನರಿಗೆ ನೆರವಾಗಿದ್ದಾರೆ.
ನಗರದ ಗಿರಿರಾಜ ನಗರ, ಶಿರಡಿ ನಗರ, ಬಾಪೂಜಿನಗರ, ಗುರುದೇವ ನಗರ, ಚಾಮುಂಡೇಶ್ವರಿ ನಗರ, ಹಾಗೂ ಶಾಂತಿನಗರದ ಸುಮಾರು 2 ಸಾವಿರ ಕುಟುಂಬಗಳಿಗೆ ತರಕಾರಿ ಹಂಚಲಾಯಿತು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಣಿ, ಮುಖಂಡರುಗಳಾದ ರವಿ ಕಲ್ಯಾಣಿ, ವೆಂಕಟೇಶ್ ಪೂಜಾರ್, ಶಫೀ ಯಾದಗಿರ, ಪ್ರವೀಣ್ ಜಕನೂರ್ ಮುಂತಾದವರು ಉಪಸ್ಥಿತರಿದ್ದರು.