ETV Bharat / state

ಕೊರೊನಾ ಲಸಿಕೆ ಸಂಗ್ರಹಕ್ಕೆ ಧಾರವಾಡ ಜಿಲ್ಲಾಡಳಿತದಿಂದ ಸಿದ್ಧತೆ

ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಲಸಿಕೆ ನೀಡುವ ಸದುದ್ದೇಶದಿಂದ ಧಾರವಾಡ ಜಿಲ್ಲಾಸ್ಪತ್ರೆ, ಕಿಮ್ಸ್ ಹಾಗೂ ವಿಮಾನ ನಿಲ್ದಾಣದಲ್ಲಿ ಲಸಿಕೆ ಸಂಗ್ರಹಣಾ ಘಟಕ ಸ್ಥಾಪನೆ ಮಾಡುತ್ತಿದ್ದು, ಈಗಾಗಲೇ 20 ಸಾವಿರ ಹೆಲ್ತ್ ಕೇರ್ ಡೇಟಾ ಬೆಸ್ ವರ್ಕರ್ಸ್ ನೇಮಕಾತಿ ಮಾಡಿಕೊಳ್ಳಲಾಗಿದೆ.

ಧಾರವಾಡ
ಧಾರವಾಡ
author img

By

Published : Dec 18, 2020, 5:20 PM IST

ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಧಾರವಾಡ ಜಿಲ್ಲಾಡಳಿತ, ಇದೀಗ ಕೋವಿಡ್​ ಲಸಿಕೆಯನ್ನು ಸಂಗ್ರಹಿಸಿಡಲು ಕೋಲ್ಡ್‌ ಸ್ಟೋರೇಜ್​ನ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದೆ.

ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಸಂಗ್ರಹ ಮಾಡಲು ಕೋಲ್ಡ್‌ ಸ್ಟೋರೇಜ್ ನಿರ್ಮಿಸಬೇಕಿದ್ದು, ಇದಕ್ಕಾಗಿ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಇಲ್ಲಿನ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ, ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಈ ಕುರಿತು ಜಿಲ್ಲಾಡಳಿತದ ಜೊತೆಗೆ ಕೂಡ ಸಮಾಲೋಚನೆ ನಡೆಸಿದ್ದು, ಜನನಿಬಿಡ ಪ್ರದೇಶ ಹಾಗೂ ಕಿಮ್ಸ್ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರದ ನಿರ್ದೇಶನದ ಮೆರಗೆ ಜಿಲ್ಲಾಡಳಿತ ಸಿದ್ಧವಾಗುತ್ತಿದೆ.

ಕೊರೊನಾ ಲಸಿಕೆ ಸಂಗ್ರಹಕ್ಕೆ ಧಾರವಾಡ ಜಿಲ್ಲಾಡಳಿತದಿಂದ ಸಿದ್ಧತೆ

ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಲಸಿಕೆ ನೀಡುವ ಸದುದ್ದೇಶದಿಂದ ಧಾರವಾಡ ಜಿಲ್ಲಾಸ್ಪತ್ರೆ, ಕಿಮ್ಸ್ ಹಾಗೂ ವಿಮಾನ ನಿಲ್ದಾಣದಲ್ಲಿ ಲಸಿಕೆ ಸಂಗ್ರಹಣಾ ಘಟಕ ಸ್ಥಾಪನೆ ಮಾಡುತ್ತಿದ್ದು, ಈಗಾಗಲೇ 20 ಸಾವಿರ ಹೆಲ್ತ್ ಕೇರ್ ಡೇಟಾ ಬೆಸ್ ವರ್ಕರ್ಸ್ ನೇಮಕಾತಿ ಮಾಡಿಕೊಳ್ಳಲಾಗಿದೆ.

ಪ್ರತಿಯೊಂದು ಘಟಕದಲ್ಲಿ 5 ಸಾವಿರ ಲಸಿಕೆಯನ್ನು ಇಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೇ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೂಡ ಲಸಿಕೆ ಇಡುವಷ್ಟು ಸಾಮರ್ಥ್ಯವಿದ್ದು, ಸರ್ಕಾರ ಕೂಡ ಧಾರವಾಡ ಜಿಲ್ಲೆಗೆ 6 ಲಕ್ಷ ಲಸಿಕೆ ಸಂಗ್ರಹಿಸುವ ದೊಡ್ಡ ಗಾತ್ರದ ರೆಫ್ರಿಜರೇಟರ್ ಕೂಡ ನೀಡುತ್ತಿದೆ. ಅಲ್ಲದೇ ವೇರ್ ಹೌಸ್​ನಲ್ಲಿ ಕೂಡ ಲಸಿಕೆ ಇಡುವ ವ್ಯವಸ್ಥೆ ಇದ್ದು, ಒಟ್ಟು 20 ಲಕ್ಷ ಲಸಿಕೆ ಸಂಗ್ರಹ ಸಾಮರ್ಥ್ಯವನ್ನು ಜಿಲ್ಲೆ ಹೊಂದಿದೆ. ಆದ್ದರಿಂದ ಲಸಿಕೆ ಕೈ ಸೇರುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿಯಲು ಜಿಲ್ಲಾಡಳಿತ ಸನ್ನದ್ಧವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.