ETV Bharat / state

ಧಾರವಾಡ : ಇಬ್ಬರು ಕೊರೊನಾ ಸೋಂಕಿತರ ಟ್ರಾವೆಲ್​ ಮಾಹಿತಿ ಪ್ರಕಟಿಸಿದ ಜಿಲ್ಲಾಡಳಿತ

ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೊರೊನಾ ದೃಢಪಟ್ಟಿದೆ. ಇವರಿಬ್ಬರೂ ಎಲ್ಲೆಲ್ಲಿ ಹೋಗಿದ್ದರೆಂಬುದರ ಕುರಿತಂತೆ ಪ್ರಯಾಣದ ಮಾಹಿತಿಯನ್ನ ಜಿಲ್ಲಾಡಳಿತ ಪ್ರಕಟಿಸಿದೆ.

DC office
DC office
author img

By

Published : Jun 3, 2020, 8:08 PM IST

ಧಾರವಾಡ : ಕೋವಿಡ್ -19 ಸೋಂಕಿತರಾಗಿರುವ ಪಿ-3397 ಹಾಗೂ ಪಿ - 3398 ಇವರ ಪ್ರಯಾಣದ ವಿವರಗಳನ್ನು ಜಿಲ್ಲಾಡಳಿತವು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.

ಪಿ-3397 ಪ್ರಯಾಣ ವಿವರ : ಪಿ- 3397 ( 47 ವರ್ಷ ಪುರುಷ) ಇವರು ಕಲಘಟಗಿ ತಾಲೂಕಿನ ಬಿ ಗುಡಿಹಾಳ ಗ್ರಾಮದ ನಿವಾಸಿಯಾಗಿದ್ದಾರೆ. ಇವರು ಲಾಕ್‌ಡೌನ್ ಅವಧಿಯಲ್ಲಿ ಬಾಡಿಗೆ ಬೊಲೆರೋ ವಾಹನದ ಮೂಲಕ ಹುಬ್ಬಳ್ಳಿಯ ಅಮರಗೋಳದ ಎಪಿಎಮ್‌ಸಿಯ ತರಕಾರಿ ಮಾರುಕಟ್ಟೆಗೆ ಏಳೆಂಟು ಬಾರಿ ಹೋಗಿ ಬಂದಿದ್ದಾರೆ. ಮೇ 18ರಂದು ಬಿಗುಡಿಹಾಳದಿಂದ ಅದೇ ಗ್ರಾಮದ ಪರಿಚಯದ ವ್ಯಕ್ತಿಯೊಂದಿಗೆ ಬೈಕ್ ಮೂಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬೆಳಗ್ಗೆ 9:30 ಗಂಟೆಗೆ ಹೋಗಿದ್ದರು. ಬೆಳಗ್ಗೆ 11.30ಕ್ಕೆ ಗ್ರಾಮಕ್ಕೆ ಮರಳಿ, ತಮ್ಮ ಗ್ರಾಮದ ವ್ಯಕ್ತಿಯೊಬ್ಬರ ಶವಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಮೇ 19ರಂದು ಅದೇ ಗ್ರಾಮದ ಇಬ್ಬರು ವ್ಯಕ್ತಿಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟು ಮಧ್ಯಾಹ್ನ 12:30ಕ್ಕೆ ದುಮ್ಮವಾಡ ಗ್ರಾಮಕ್ಕೆ ಹೋಗಿ ಮಧ್ಯಾಹ್ನ 2:30ಕ್ಕೆ ಪುನಃ ತಮ್ಮ ಮನೆಗೆ ಹಿಂದಿರುಗಿದ್ದಾರೆ. ಅದೇ ದಿನ ಸಂಜೆ 6:30ಕ್ಕೆ ದ್ವಿಚಕ್ರ ವಾಹನದಲ್ಲಿ ಕಲಘಟಗಿಗೆ ಹೋಗಿ ಸಂಜೆ 7:30ಕ್ಕೆ ಮನೆಗೆ ಹಿಂದಿರುಗಿದ್ದಾರೆ. ಮೇ 20ರಂದು ಬೆಳಗ್ಗೆ 9:30ಕ್ಕೆ ದ್ವಿಚಕ್ರ ವಾಹನದಲ್ಲಿ ಕಲಘಟಗಿಗೆ ಹೋಗಿ ನಂತರ ಮಧ್ಯಾಹ್ನ 12 ‌ಗಂಟೆಗೆ ಮನೆಗೆ ಹಿಂದಿರುಗಿ ಬಂದಿದ್ದಾರೆ.

ಮೇ 22 ರಂದು ಮಧ್ಯಾಹ್ನ 3:30ಕ್ಕೆ ಮಗನೊಂದಿಗೆ ದ್ವಿಚಕ್ರ ವಾಹನದ ಮೂಲಕ ಮಿಶ್ರಿಕೋಟಿಯಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಸಂಜೆ 4:30ಕ್ಕೆ ಮನೆಗೆ ಮರಳಿದ್ದಾರೆ. ಮೇ 22 ರಿಂದ ಮೇ 26 ರವರಗೆ ಮನೆಯಲ್ಲಿಯೇ ಇದ್ದು, ಮೇ 26 ರಂದು ರಾತ್ರಿ 9 ಗಂಟೆಗೆ ತಮ್ಮ ಇಂಡಿಕಾ ಕಾರ್‌ನಲ್ಲಿ ನಾಲ್ಕು ಜನ ಮಕ್ಕಳ ಜೊತೆ ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿ ದಾಖಲಾಗಿದ್ದಾರೆ. ಅಲ್ಲದೆ ಅದೇ ದಿನ ಅವರ ಗಂಟಲು ದ್ರವ ಮಾದರಿ ಪರೀಕ್ಷೆಗಾಗಿ ಪಡೆಯಲಾಗಿದೆ. ಮೇ 31ರಂದು ಪಿ-3397ರವರು ಕೋವಿಡ್ -19 ಸೋಂಕಿತರು ಎಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಿ - 3398 (25 ವರ್ಷ, ಪುರುಷ) ಇವರ ಪ್ರಯಾಣ ವಿವರ

ಇವರು ಬಿಹಾರ ರಾಜ್ಯದ ನಿವಾಸಿಯಾಗಿದ್ದಾರೆ. ಇವರು ಲಾಕ್‌ಡೌನ್ ಪೂರ್ವದ ಮೂರು ತಿಂಗಳು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿನ ಖಾಸಗಿ ಗಾರ್ಮೆಂಟಿನಲ್ಲಿ ಕಾರ್ಯನಿರ್ವಹಿಸಿ ಅಲ್ಲಿಯೇ ವಾಸವಿದ್ದು, ಮೇ 23 ರಂದು ಕಾಮಾಕ್ಷಿ ಪಾಳ್ಯದಿಂದ ಹೊರಟು ಬಸ್ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣ ತಲುಪಿ ನಂತರ ಸಂಜೆ 5 ಗಂಟೆಗೆ ರಾಜಹಂಸ ಬಸ್‌ ನಂ ಕೆಎ-25 - ಎಫ್ - 6860) ಮೂಲಕ ಹೊರಟು ಮೇ 24ರ ನಸುಕಿನ ಜಾವ 1:30 ಗಂಟೆಗೆ ಹುಬ್ಬಳ್ಳಿಯ ಗಬ್ಬೂರ ಬೈಪಾಸ್‌ ತಲುಪಿ ಅಲ್ಲಿಂದ ಆಟೋ ಮೂಲಕ ಹಳೇ ಮಂಟೂರು ರಸ್ತೆ ಪಕ್ಕದಲ್ಲಿನ ಆಶ್ರಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ಬಂದಿದ್ದಾರೆ.

ಮೇ 24 ಹಾಗೂ‌ ಮೇ 25 ರಂದು ಆಶ್ರಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ವಾಸವಾಗಿದ್ದು, ಮೇ 26 ರಂದು ಆಟೋ ಮೂಲಕ ಮಧ್ಯಾಹ್ನ 12:30 ಗಂಟೆಗೆ ಚಿಟಗುಪ್ಪಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಮಧ್ಯಾಹ್ನ 3 ಗಂಟೆಗೆ ಆಶ್ರಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ಹಿಂದಿರುಗಿದ್ದಾರೆ. ಅದೇ ದಿನ ಇವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ.

ಮೇ 27 ರಿಂದ ಮೇ 29 ರವರೆಗೆ ಹಳೇ ಮಂಟೂರು ರಸ್ತೆ ಪಕ್ಕದಲ್ಲಿನ ಆಶ್ರಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮೇ 31ರಂದು ಪಿ -3398 ರವರು ಕೋವಿಡ್ -19 ಸೋಂಕಿತರು ಎಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರು ಸೋಂಕಿತರನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದೆ. ಆ ಎಲ್ಲಾ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು. ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೊಳಪಡಬೇಕು ಎಂದು ಪ್ರಕಟಣೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.