ETV Bharat / state

'ಕರ್ನಾಟಕದ ಶಬರಿಮಲೈ'ಗೆ ಹರಿದು ಬರುತ್ತಿದೆ ಭಕ್ತ ಸಾಗರ - Ayyappa Temple at Shirur Park, Vidyanagar

ಈಗಾಗಲೇ ಸಾವಿರಾರು ಭಕ್ತರು ಮಾಲೆ ಧರಿಸಿಕೊಂಡು ಇಲ್ಲಿಂದಲೇ ಅಯ್ಯಪ್ಪನ‌ ವ್ರತ ಮಾಡಿದ್ದಾರೆ. ಈಗ ಪುನಃ ಇಲ್ಲಿಯೇ ದರ್ಶನಕ್ಕೆ ಬರುತ್ತಿರುವುದು ವಿಶೇಷ. ಆನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ನಿರ್ಮಾಣ ಮಾಡಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಡೆಯುವ ಪೂಜೆ ನೋಡುವುದೇ ಒಂದು ಸೌಭಾಗ್ಯ..

ವಿದ್ಯಾನಗರದ ಶಿರೂರ ಪಾರ್ಕ್​ನಲ್ಲಿರುವ ಅಯ್ಯಪ್ಪ ದೇಗುಲ

author img

By

Published : Jan 1, 2021, 7:24 PM IST

ಹುಬ್ಬಳ್ಳಿ : ವಿದ್ಯಾನಗರದ ಶಿರೂರ ಪಾರ್ಕ್​ನಲ್ಲಿರುವ ಅಯ್ಯಪ್ಪ ದೇಗುಲ ಕರ್ನಾಟಕದ ಶಬರಿ ಮಲೈ ಎಂದೇ ಖ್ಯಾತಿ ಪಡೆದಿದೆ. ಸಾವಿರಾರು ಭಕ್ತರಿಗೆ ದೀಕ್ಷೆ ನೀಡುವ ಪುಣ್ಯ ಕ್ಷೇತ್ರ ಎಂದು ಹೆಸರುವಾಸಿಯಾಗಿದೆ. 1994-95ರಲ್ಲಿ ಶಂಕುಸ್ಥಾಪನೆಗೊಂಡ ಈ ದೇಗುಲ ಈಗ ಉತ್ತರ ಕರ್ನಾಟಕ ಮಾತ್ರವಲ್ಲದೆ ರಾಜ್ಯದಲ್ಲಿಯೇ ಕರ್ನಾಟಕದ ಶಬರಿಮಲೈ ಎಂದೇ ಖ್ಯಾತಿ ಪಡೆದಿದೆ.

ವಿದ್ಯಾನಗರದ ಶಿರೂರ ಪಾರ್ಕ್​ನಲ್ಲಿರುವ ಅಯ್ಯಪ್ಪ ದೇಗುಲ..

ಶಬರಿಮಲೈ ಅಯ್ಯಪ್ಪನ‌ ದೇವಸ್ಥಾನದ ತದ್ರೂಪಿಯಾಗಿ‌ ನಿರ್ಮಾಣ ಮಾಡಲಾಗಿದ್ದು, ಮೂಲ ದೇವಾಲಯದ ಅಳತೆ ಗೋಲಿನಲ್ಲಿಯೇ ನಿರ್ಮಾಣ ಮಾಡಿರುವುದು ವಿಶೇಷ. ಕೊರೊನಾ‌ ಸಂದರ್ಭದಲ್ಲಿ ಶಬರಿಮಲೈಗೆ ಹೋಗಲು ಸಾಧ್ಯವಾಗದ ಹಿನ್ನೆಲೆ ಶಿರೂರ ಪಾರ್ಕ್​ನ ಅಯ್ಯಪ್ಪ ದೇವಸ್ಥಾನ ಕರ್ನಾಟಕದ ಶಬರಿಮಲೈ ಆಗಿದೆ.

ನಿತ್ಯ ನೂರಾರು ಮಾಲಾಧಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ರಾಜ್ಯ ಅಲ್ಲದೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡಿನ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ‌ ಪಡೆದುಕೊಳ್ಳುವ ಮೂಲಕ ವಿಶೇಷ ಪೂಜೆ ಮಾಡುತ್ತಿದ್ದಾರೆ.

ವಿದ್ಯಾನಗರದ ಶಿರೂರ ಪಾರ್ಕ್​ನಲ್ಲಿರುವ ಅಯ್ಯಪ್ಪ ದೇಗುಲ
ವಿದ್ಯಾನಗರದ ಶಿರೂರ ಪಾರ್ಕ್​ನಲ್ಲಿರುವ ಅಯ್ಯಪ್ಪ ದೇಗುಲ

ಈಗಾಗಲೇ ಸಾವಿರಾರು ಭಕ್ತರು ಮಾಲೆ ಧರಿಸಿಕೊಂಡು ಇಲ್ಲಿಂದಲೇ ಅಯ್ಯಪ್ಪನ‌ ವ್ರತ ಮಾಡಿದ್ದಾರೆ. ಈಗ ಪುನಃ ಇಲ್ಲಿಯೇ ದರ್ಶನಕ್ಕೆ ಬರುತ್ತಿರುವುದು ವಿಶೇಷ. ಆನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ನಿರ್ಮಾಣ ಮಾಡಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಡೆಯುವ ಪೂಜೆ ನೋಡುವುದೇ ಒಂದು ಸೌಭಾಗ್ಯ. ಮಕ್ಕಳು, ವೃದ್ಧರು, ಅಂಗವಿಕಲರು ಕೂಡ ಶಿರೂರ ಪಾರ್ಕ್​ ಅಯ್ಯಪ್ಪ ದೇವಸ್ಥಾನದಲ್ಲಿ ಸ್ವಾಮಿಯ ದರ್ಶನ ಪಡೆದು ಪುನೀತರಾಗ್ತಾರೆ.

ಓದಿ:ಹೊಸ ವರ್ಷದ ಸಂಭ್ರಮ.. ಧರ್ಮಸ್ಥಳ ದೇಗುಲಕ್ಕೆ ಹೂ, ಹಣ್ಣು, ತರಕಾರಿಗಳಿಂದ ವಿಶೇಷ ಸಿಂಗಾರ!

ಅಯ್ಯಪ್ಪನ ದೇಗುಲದಲ್ಲಿ ಮಂಡಲ ಪೂಜೆ, ಸಂಕ್ರಮಣ ಪೂಜೆಗೆ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಈ ಬಾರಿ 25 ಸಾವಿರಕ್ಕೂ ಅಧಿಕ ಜನ ಬರುವ ಸಾಧ್ಯತೆ ಇದೆ. ಇದಕ್ಕಾಗಿ ಅಯ್ಯಪ್ಪ ಸ್ವಾಮಿ ಟ್ರಸ್ಟ್ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.