ETV Bharat / state

ವರುಣನ ಆರ್ಭಟಕ್ಕೆ ಮುಂಗಾರು ಬೆಳೆಗಳು ನಾಶ.. ಸರ್ಕಾರಕ್ಕೆ ಕಾಣುತ್ತಿಲ್ಲವೇ ರೈತನ ಕಣ್ಣೀರು? - ಈರುಳ್ಳಿ ಬೆಳೆ ನಾಶ ಸುದ್ದಿ

ರೈತರಿಗೆ ಆಸರೆ ಜೊತೆಗೆ ಲಾಭ ತರುವುದು ಈರುಳ್ಳಿ, ಶೇಂಗಾ ಬೆಳೆಗಳು. ಆದರೆ, ಮಳೆರಾಯನ ಆರ್ಭಟಕ್ಕೆ ಫಸಲು ಬರುವ ಸಂದರ್ಭದಲ್ಲಿ ಬೆಳೆಗಳು ಮೊಳಕೆ ಜೊತೆಗೆ ಕೊಳೆಯುವ ಸ್ಥಿತಿಗೆ ತಲುಪಿವೆ..

ವರುಣನ ಆರ್ಭಟಕ್ಕೆ ಮುಂಗಾರು ಬೆಳೆಗಳು ನಾಶ
ವರುಣನ ಆರ್ಭಟಕ್ಕೆ ಮುಂಗಾರು ಬೆಳೆಗಳು ನಾಶ
author img

By

Published : Sep 20, 2020, 5:52 PM IST

Updated : Sep 20, 2020, 6:02 PM IST

ಹುಬ್ಬಳ್ಳಿ : ಪ್ರತಿ ವರ್ಷವೂ ಮುಂಗಾರು ಬೆಳೆ ಚೆನ್ನಾಗಿ ಬರುತ್ತಿತ್ತು. ಆದರೆ, ಈ ಸಾರಿ ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿ ಈರುಳ್ಳಿ, ಹೆಸರು, ಮೆಣಸಿನಕಾಯಿ, ಶೇಂಗಾ ಹಾಗೂ ಸೊಯಾಬಿನ್ ಸೇರಿ ಬಹುತೇಕ ಮುಂಗಾರು ಬೆಳೆಗಳೆಲ್ಲವೂ ಹಾಳಾಗಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ರೈತ ಪ್ರಭು ಬ್ಯಾಹಟ್ಟಿ ಅವರು ಸಾವಿರಾರು ರೂ. ಖರ್ಚು ಮಾಡಿ ಈರುಳ್ಳಿ, ಶೇಂಗಾ ಬಿತ್ತಿದ್ರು. ಆದರೆ, ಮಳೆರಾಯನ ಆರ್ಭಟಕ್ಕೆ ಈಗ ಅವರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಭಾರೀ ಮಳೆಯಿಂದಾಗಿ ಈರುಳ್ಳಿ ನೀರಿಗೆ ಸಿಕ್ಕಿ ಕೊಳೆಯುವಂತಾಗಿದೆ. ಹೀಗಾದ್ರೆ ರೈತರು ಹೇಗೆ ಬದುಕಬೇಕು?.

ವರುಣನ ಆರ್ಭಟಕ್ಕೆ ಮುಂಗಾರು ಬೆಳೆಗಳು ನಾಶ

ಕೇಂದ್ರ ಸರ್ಕಾರ ಈರುಳ್ಳಿ ರಫ್ತು ಮಾಡುವುದನ್ನು ನಿಲ್ಲಿಸಿದೆ. ಇದರಿಂದ ಈರುಳ್ಳಿ ಬೆಲೆಯು ಕುಸಿಯುತ್ತಿದೆ. ಮೊದಲಿದ್ದ ಬೆಲೆ ಈಗ ರೈತನ ಬೆಳೆಗಳಿಗೆ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಬೆಂಬಲ ಬೆಲೆ ನೀಡಿ, ಈರುಳ್ಳಿ ಖರೀದಿಸಬೇಕು. ಇಲ್ಲವಾದ್ರೆ ರೈತರು ಆತ್ಮಹತ್ಯೆ ಮಾಡಿಕೊಳ್ಳವ ಹಂತಕ್ಕೆ ತಲುಪುತ್ತಾರೆ ಎಂದು ರೈತ ಪ್ರಭು ಬ್ಯಾಹಟ್ಟಿ ಅಳಲು ತೋಡಿಕೊಂಡಿದ್ದಾರೆ.

ರೈತರಿಗೆ ಆಸರೆ ಜೊತೆಗೆ ಲಾಭ ತರುವುದು ಈರುಳ್ಳಿ, ಶೇಂಗಾ ಬೆಳೆಗಳು. ಆದರೆ, ಮಳೆರಾಯನ ಆರ್ಭಟಕ್ಕೆ ಫಸಲು ಬರುವ ಸಂದರ್ಭದಲ್ಲಿ ಬೆಳೆಗಳು ಮೊಳಕೆ ಜೊತೆಗೆ ಕೊಳೆಯುವ ಸ್ಥಿತಿಗೆ ತಲುಪಿವೆ. ಇಂತಹ ಬೆಳೆಗಳನ್ನು ಏನಾದ್ರೂ ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೆ, ಯಾವುದೇ ಪ್ರಯೋಜನವಿಲ್ಲ. ಬಿತ್ತನೆಗೆ ಹಾಕಿದ ಹಣವೂ ಸಹ ಮರಳಿ ಬರುವುದಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Last Updated : Sep 20, 2020, 6:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.