ETV Bharat / state

ಹುಬ್ಬಳ್ಳಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ನೆಲಸಮ..ಇದು ಈಟಿವಿ ಭಾರತ್​ನ ಇಂಪ್ಯಾಕ್ಟ್​

ಹುಬ್ಬಳ್ಳಿಯ ಮ್ಯಾಗೇರ ಓಣಿಯಲ್ಲಿ ಜೀವ ಬಲಿಗಾಗಿ ಕಾದು ಕುಳಿತ ಮಹಾನಗರ ಪಾಲಿಕೆ ಕಟ್ಟಡದ ಕುರಿತ ಈಟಿವಿ ಭಾರತ್​ ವರದಿಯೊಂದನ್ನು ಪ್ರಕಟಿಸಿತ್ತು. ಅದರ ಫಲಶ್ರುತಿಯಾಗಿ ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು ಕೊನೆಗೂ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ನೆಲಸಮ ಮಾಡಿದ್ದಾರೆ.

demolition-of-municipal-corporation-building
author img

By

Published : Aug 16, 2019, 6:42 PM IST

ಹುಬ್ಬಳ್ಳಿ: ಜೀವ ಬಲಿಗಾಗಿ ಕಾದು ಕುಳಿತ ಮಹಾನಗರ ಪಾಲಿಕೆ ಕಟ್ಟಡವನ್ನು ಅಧಿಕಾರಿಗಳು ಕೊನೆಗೂ ನೆಲಸಮ ಮಾಡಿದ್ದಾರೆ.

ನಗರದ ಮ್ಯಾಗೇರ ಓಣಿಯಲ್ಲಿ ಕಳೆದ 50-60 ವರ್ಷಗಳ ಹಿಂದೆ ಮಹಾನಗರ ಪಾಲಿಕೆಯವರು ವಾಣಿಜ್ಯ ಮಳಿಗೆಯನ್ನ ಕಟ್ಟಿದ್ದರು. ಈ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ನೆಲಕ್ಕುರುಳುವ ಸ್ಥಿತಿಗೆ ತಲುಪಿದ್ದು, ಈ ಕಟ್ಟಡ ದುಸ್ಥಿತಿ ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂಬ ವರದಿಯನ್ನು ಈಟಿವಿ ಭಾರತ್​ ಪ್ರಕಟಿಸಿತ್ತು. ಈ ವರದಿಗೆ ಈಗ ಫಲಶೃತಿ ಸಿಕ್ಕಿದ್ದು ವರದಿಯಿಂದ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಕಟ್ಟಡ ನೆಲಸಮ ಮಾಡುತ್ತಿದ್ದಾರೆ.

ಈಟಿವಿ ಭಾರತ್​ನ ಫಲಶ್ರುತಿ

ಈ ಕಟ್ಟಡ ಸಂಪೂರ್ಣವಾಗಿ ಹಾಳಾಗಿತ್ತು. ಎಲ್ಲೆಂದರಲ್ಲಿ ಕಟ್ಟಡ ಬಿರುಕು ಬಿಟ್ಟಿದ್ದು, ಕೆಲವು ಭಾಗದಲ್ಲಿ ಕಟ್ಟಡದ ಮೇಲ್ಚಾವಣಿಯು ಕುಸಿದು ಬಿದ್ದಿತ್ತು. 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಈ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಜನನಿಬಿಡ ಪ್ರದೇಶವಾಗಿದ್ದು, ಸಾವಿರಾರು ಜನರು ದಿನನಿತ್ಯ ಇಲ್ಲಿ ಓಡಾಡುತ್ತಿದ್ದರು. ಯಾವಾಗ ಬೇಕಾದ್ರು ಕುಸಿದು ಬೀಳುವ ಹಂತದಲ್ಲಿರುವ ಈ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.‌

ಕೊನೆಗೂ ಕಟ್ಟಡ ತೆರವುಗೊಳಿಸಿರುವ ಪಾಲಿಕೆ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದು, ಈ ಟಿವಿ ಭಾರತ ವರದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Intro:ಹುಬ್ಬಳ್ಳಿ-01

ಜೀವ ಬಲಿಗಾಗಿ ಕಾದು ಕುಳಿತ ಮಹಾನಗರ ಪಾಲಿಕೆ ಕಟ್ಟಡವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಕೊನೆಗೂ ನೆಲಸಮ ಮಾಡುತ್ತಿದ್ದಾರೆ.
ನಗರದ ಮ್ಯಾಗೇರ ಓಣಿಯಲ್ಲಿ ಕಳೆದ 50-60 ವರ್ಷಗಳ ಹಿಂದೆ ಮಹಾನಗರ ಪಾಲಿಕೆಯವರು ವಾಣಿಜ್ಯ ಮಳಿಗೆಯನ್ನ ಕಟ್ಟಿದ್ದರು. ಈ ಕಟ್ಟಡ ಶೀಥಿಲಾವಸ್ಥೆಗೆ ತಲುಪಿದ್ದು, ನೆಲಕ್ಕುರುಳುವ ಸ್ಥಿತಿಗೆ ತಲುಪಿದ್ದು, ಈ ಕಟ್ಟಡ ದುಸ್ಥಿತಿ ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂಬ ವರದಿಯನ್ನು ಈಟಿವಿ ಭಾರತ ಪ್ರಕಟಿಸಿತ್ತು. ಈ ವರದಿಗೆ ಈಗ ಫಲಶೃತಿ ಸಿಕ್ಕಿದ್ದು ವರದಿಯಿಂದ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಕಟ್ಟಡ ನೆಲಸಮ ಮಾಡುತ್ತಿದ್ದಾರೆ.
ಈ ಕಟ್ಟಡ ಸಂಪೂರ್ಣ ವಾಗಿ ಹಾಳಾಗಿತ್ತು. ಎಲ್ಲೆಂದರಲ್ಲಿ ಕಟ್ಟಡ ಬಿರುಕು ಬಿಟ್ಟಿದ್ದು, ಕೆಲವು ಭಾಗದಲ್ಲಿ ಕಟ್ಟಡದ ಮೇಲ್ಚಾವಣಿಯು ಕುಸಿದು ಬಿದ್ದಿತ್ತು. 20ಕ್ಕು ಹೆಚ್ಚು ವಾಣಿಜ್ಯ ಮಳಿಗೆಗಳು ಈ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಜನನಿಬಿಡ ಪ್ರದೇಶವಾಗಿದ್ದು, ಸಾವಿರಾರು ಜನರು ದಿನನಿತ್ಯ ಇಲ್ಲಿ ಓಡಾಡುತ್ತಿದ್ದರು. ಯಾವಾಗ ಬೇಕಾದ್ರು ಕುಸಿದು ಬೀಳುವ ಹಂತದಲ್ಲಿರುವ ಈ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.‌ ಕೊನೆಗೂ ಕಟ್ಟಡ ತೆರವುಗೊಳಿಸಿರುವ ಪಾಲಿಕೆ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದು, ಈ ಟಿವಿ ಭಾರತ ವರದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೈಟ್ - ರಂಗಾ, ಸ್ಥಳೀಯ ನಿವಾಸಿ

ಬೈಟ್ -ಶಿವಾನಂದ ಪಾಟೀಲ್, ಸ್ಥಳೀಯ ನಿವಾಸಿBody:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.