ಧಾರವಾಡ: ಸರ್ಕಾರದಿಂದ ಮದ್ಯಪಾನ ಹಾಗೂ ಮಾಂಸ ಮಾರಾಟ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಭಾರತ ರಕ್ಷಾ ಮಂಚ್, ಶ್ರೀರಾಮ ಸೇನೆ ಸೇರಿದಂತೆ ಐದಕ್ಕೂ ಹೆಚ್ಚು ಸಂಘಟನೆಗಳಿಂದ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರಿಗೆ ಮನವಿ ಸಲ್ಲಿಸಲಾಯಿತು.
ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಧಾರ್ಮಿಕ ಮುಖಂಡರು, ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದರು.
ಬಡವರು, ಕಾರ್ಮಿಕರು, ರೈತರು, ಸಾಮಾನ್ಯ ವರ್ಗ, ವಿದ್ಯಾರ್ಥಿಗಳು ಹಾಗೂ ಇತರರು ಕುಡಿತಕ್ಕೆ ಬಲಿಯಾಗಿ ಆರೋಗ್ಯ ಹಾಗೂ ಆರ್ಥಿಕ ದುರ್ಬಲರಾಗಿ ನಾಶವಾಗುತ್ತಿದ್ದಾರೆ. ಸರ್ಕಾರದ ಈ ನಿರ್ಣಯ ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಕೊರೊನಾ ದುಷ್ಪರಿಣಾಮದಿಂದ ಆರ್ಥಿಕ ಮುಗ್ಗಟ್ಟು ಎದುರಾಗಿರುವುದು ಸಹಜವಾಗಿದೆ. ಆದರೆ ಮದ್ಯದಿಂದ ಆರ್ಥಿಕ ಸಬಲೀಕರಣದ ಚಿಂತನೆ ಮಹಾ ಮೂರ್ಖತನವಾಗಿದೆ. ಕೂಡಲೇ ಮದ್ಯ ಮರಾಟ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.